ಶಾಸ್ತ್ರದ ಪ್ರಕಾರ ಮನೆಯಲ್ಲಿ ಈ ದೇವರುಗಳ ವಿಗ್ರಹಗಳನ್ನಿಟ್ಟು ಪೂಜೆ ಮಾಡಬಾರದಂತೆ

ಸೋಮವಾರ, 29 ಅಕ್ಟೋಬರ್ 2018 (14:27 IST)
ಬೆಂಗಳೂರು : ಹಿಂದೂ ಶಾಸ್ತ್ರದ ಪ್ರಕಾರ ಮನೆಯಲ್ಲಿ ದೇವರ ಫೋಟೊ ಅಥವಾ ವಿಗ್ರಹಗಳನ್ನಿಟ್ಟು ಪೂಜೆ ಮಾಡುತ್ತಾರೆ. ಇದರಿಂದ ಮನೆಯಲ್ಲಿ ಸಕಾರಾತ್ಮಕ ಶಕ್ತಿ ನೆಲೆಸಿರುತ್ತದೆ. ಆದರೆ ಕೆಲವೊಂದು ದೇವರ ವಿಗ್ರಹಗಳನ್ನು ಮನೆಯಲ್ಲಿಟ್ಟು  ಪೂಜೆ ಮಾಡಬಾರದಂತೆ. ಇದರಿಂದ ಮನೆಗೆ ಒಳಿತಾಗುವುದಿಲ್ಲವಂತೆ.


*ಶನಿ ನ್ಯಾಯದ ದೇವರು. ಆತನ ಕಣ್ಣಿನಿಂದ ಪ್ರತಿಯೊಬ್ಬರೂ ತಪ್ಪಿಸಿಕೊಳ್ಳಲು ಪ್ರಯತ್ನಿಸ್ತಾರೆ. ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಮನೆಯಲ್ಲಿ ಶನಿಯ ಯಾವುದೇ ಮೂರ್ತಿಯನ್ನು ಇಡಬಾರದು.


*ಭಗವಂತ ಶಿವನ ನಟರಾಜ ರೂಪದ ಪ್ರತಿಮೆಯನ್ನು ಮನೆಯಲ್ಲಿ ಇಡುವುದು ಒಳ್ಳೆಯದಲ್ಲ. ನಟರಾಜನ ರೂಪ ವಿನಾಶದ ರೂಪ. ಹಾಗಾಗಿ ಇದು ಮನೆಯಲ್ಲಿರಬಾರದು ಎಂದು ಶಾಸ್ತ್ರ ಹೇಳುತ್ತದೆ.


*ದೇವಿ ಲಕ್ಷ್ಮಿ ನಿಂತ ಭಂಗಿಯಲ್ಲಿರುವ ಪ್ರತಿಮೆಯನ್ನು ಎಂದೂ ಇಡಬೇಡಿ. ಯಾವಾಗ್ಲೂ ಮನೆಯಲ್ಲಿ ಕುಳಿತ ಲಕ್ಷ್ಮಿ ಪ್ರತಿಮೆ ಮಾತ್ರ ಇರಬೇಕು.


*ಭಗವಂತ ಬೈರವ ಶಿವನ ರೂಪ. ಆದ್ರೆ ಭೈರವನ ಮೂರ್ತಿ ಅಥವಾ ಫೋಟೋವನ್ನು ಎಂದೂ ಮನೆಯಲ್ಲಿಡಬಾರದು.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ