ಬೆಂಗಳೂರು : ನಕರಾತ್ಮಕ ಶಕ್ತಿ ಮನುಷ್ಯ, ಮನೆ ಮೇಲೆ ಮಾತ್ರ ಕೆಟ್ಟ ದೃಷ್ಟಿ ಬೀಳುವುದಿಲ್ಲ, ಅದು ಹಣದ ಮೇಲೂ ಕೂಡ ತನ್ನ ದೃಷ್ಟಿ ಹರಿಸುತ್ತದೆ. ಇದರಿಂದ ಅಂತಹ ಹಣಗಳು ನಿಮ್ಮ ಕೈಯಲ್ಲಿ ಉಳಿಯುವುದಿಲ್ಲ. ಅದಕ್ಕೆ ಹೀಗೆ ಪರಿಹಾರ ಮಾಡಿ.
ಹಣದಲ್ಲಿರುವ ನಕರಾತ್ಮಕ ಶಕ್ತಿಯನ್ನು ಹೊಡೆದೊಡಿಸಲು ಒಂದು ಮಣ್ಣಿನ ಮಡಿಕೆಯಲ್ಲಿ ಮೂಕ್ಕಾಲು ಭಾಗ ಕಲ್ಲುಪ್ಪು ತುಂಬಿಸಿ ಅದರ ಮೇಲೆ ಕಾಗದ ಇಟ್ಟು ಅದರ ಮೇಲೆ ಹಣವನ್ನು ಇಡಿ. ಮರುದಿನ ಹಣವನ್ನು ತೆಗೆದು ಬೀರುವಿನಲ್ಲಿಡಿ. ಇದರಿಂದ ಹಣದಲ್ಲಿರುವ ನಕರಾತ್ಮಕ ಶಕ್ತಿಯನ್ನು ಉಪ್ಪು ಹೀರಿಕೊಳ್ಳುತ್ತದೆ. ಹಣ ನಿಮ್ಮ ಕೈಯಲ್ಲೆ ಉಳಿಯುತ್ತದೆ.