ಮುಂದಿನ ಜನ್ಮ ಚೆನ್ನಾಗಿರಬೇಕಾದರೆ ಮಾರ್ಗಶಿರ ಮಾಸದಲ್ಲಿ ಹೀಗೆ ಮಾಡಬೇಕು

Krishnaveni K

ಶುಕ್ರವಾರ, 13 ಡಿಸೆಂಬರ್ 2024 (08:44 IST)
ಬೆಂಗಳೂರು: ಮಾರ್ಗಶಿರ ಮಾಸವು ಭಗವಾನ್ ಮಹಾವಿಷ್ಣುವಿನನ್ನು ಆರಾಧಿಸುವ ಪವಿತ್ರ ಮಾಸವಾಗಿದೆ. ಈ ಮಾಸದಲ್ಲಿ ಮಹಾವಿಷ್ಣುವಿನ ಕುರಿತು ಧ್ಯಾನ, ಆರಾಧನೆ ಮಾಡುವುದರಿಂದ ಅನೇಕ ಲಾಭಗಳಿವೆ.

ಮಾರ್ಗಶಿರ ಮಾಸವು ಅತ್ಯಂತ ಪವಿತ್ರ ಮಾಸವಾಗಿದ್ದು, ಈ ಮಾಸದಲ್ಲಿ ನದಿಸ್ನಾನ ಮಾಡುವುದು, ಉಪವಾಸ ವ್ರತ ಕೈಗೊಳ್ಳುವುದು, ಭಜನೆ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ. ಅದರಲ್ಲೂ ವಿಶೇಷವಾಗಿ ಈ ಮಾಸದಲ್ಲಿ ಉಪವಾಸ ವ್ರತ ಕೈಗೊಂಡರೆ ನಿಮಗೆ ವಿಶೇಷವಾಗಿ ವಿಷ್ಣುವಿನ ಅನುಗ್ರಹ ಸಿಗುವುದು.

ಮಾರ್ಗಶಿರ ಮಾಸದಲ್ಲಿ ಉಪವಾಸ ವ್ರತ ಕೈಗೊಳ್ಳುವುದರಿಂದ ಈ ಜನ್ಮ ಮಾತ್ರವಲ್ಲ, ಮುಂದಿನ ಜನ್ಮದಲ್ಲೂ ನಿಮ್ಮ ಜೀವನ ಇನ್ನಷ್ಟು ಸುಖಮಯವಾಗಿರುವುದು ಎಂಬ ನಂಬಿಕೆಯಿದೆ. ಮುಂದಿನ ಜನ್ಮದಲ್ಲಿ ಎಲ್ಲಾ ದುಃಖ, ರೋಗ ಭಯಗಳಿಂದ ಮುಕ್ತನಾಗಿ ಸುಖಮಯ ಜೀವನ ಪಡೆಯುತ್ತಾನೆ ಎಂಬ ನಂಬಿಕೆಯಿದೆ.

ಮಾರ್ಗಶಿರ ಮಾಸದಲ್ಲಿ ಭಜನೆ, ದೇವರ ಕೀರ್ತನೆಗಳನ್ನು ಹಾಡುವುದಕ್ಕೂ ಅಷ್ಟೇ ಪ್ರಾಮುಖ್ಯತೆಯಿದೆ. ಇದರಿಂದ ನಿಮ್ಮ ಕಳೆದ ಜನ್ಮಗಳ ಪಾಪಗಳು ಕಳೆದು ಕೃತಾರ್ಥರಾಗುತ್ತೀರಿ. ದೇವರ ಕೃಪೆಗೆ ಪಾತ್ರರಾಗಬಹುದು ಎಂಬ ನಂಬಿಕೆಯಿದೆ. ಹೀಗಾಗಿ ಮಾರ್ಗಶಿರ ಮಾಸದಲ್ಲಿ ತಪ್ಪದೇ ಹರಿನಾಮ ಸ್ಮರಣೆ ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ