ಗರ್ಭಿಣಿ ನದಿ ಅಥವಾ ಕಣಿವೆಯನ್ನು ದಾಟಬಾರದು ಎಂದು ಹಿರಿಯರು ಹೇಳುವುದ್ಯಾಕೆ ಗೊತ್ತಾ?

ಸೋಮವಾರ, 1 ಅಕ್ಟೋಬರ್ 2018 (12:32 IST)
ಬೆಂಗಳೂರು : ಮಕ್ಕಳ ಹಾಗೂ ತಾಯಿಯ ಆರೋಗ್ಯದ ದೃಷ್ಟಿಯಿಂದ ಹಿಂದಿನಿಂದಲೂ ಅನೇಕ ಪದ್ಧತಿಗಳನ್ನು ರೂಢಿಸಿಕೊಂಡು ಬರಲಾಗಿದೆ. ಈಗಿನ ಕಾಲದಲ್ಲಿ ಹಿಂದಿನ ಪದ್ಧತಿಗಳಿಗೆ ಬೆಲೆ ಇಲ್ಲ. ಮೂಢನಂಬಿಕೆ ಎನ್ನುವ ಕಾರಣಕ್ಕೆ ಮೂಲೆಗುಂಪು ಮಾಡುವವರೇ ಹೆಚ್ಚು. ಆದ್ರೆ ಗರ್ಭಿಣಿಯಾದವಳು ಕೆಲವೊಂದು ನಿಯಮಗಳನ್ನು ಪಾಲಿಸಿದ್ರೆ ಆಕೆಯ ಮುಂದಿನ ಜೀವನ ಸುಖವಾಗಿರಲಿದೆ ಎಂದು ಶಾಸ್ತ್ರಹೇಳುತ್ತದೆ.


ಒಂದು ಪದ್ಧತಿ ಪ್ರಕಾರ, 7 ತಿಂಗಳು ತುಂಬಿದ ಗರ್ಭಿಣಿ ನದಿ ಅಥವಾ ಕಣಿವೆಯನ್ನು ದಾಟಬಾರದು. ಹಾಗೆ ಅದರ ಬಳಿ ಹೋಗಬಾರದು.  ನದಿ ಹಾಗೂ ಕಣಿವೆ ಬಳಿ ನಕಾರಾತ್ಮಕ ಶಕ್ತಿ ಮನೆ ಮಾಡಿರುತ್ತದೆ. ಸಾಮಾನ್ಯವಾಗಿ ನದಿ ಬಳಿಯೇ ಸ್ಮಶಾನವಿರುತ್ತದೆ. ಹಾಗಾಗಿ ಗರ್ಭಿಣಿಯಾದವಳು ಅಲ್ಲಿಗೆ ಹೋಗುವುದು ಒಳಿತಲ್ಲ. ಗರ್ಭಿಣಿಯಾದಾಗ ದೇಹ ಹಾಗೂ ಮನಸ್ಸು ಎರಡರಲ್ಲೂ ಸಾಕಷ್ಟು ಬದಲಾವಣೆಯಾಗುತ್ತದೆ. ನದಿ ದಾಟಿದ್ರೆ ನಕಾರಾತ್ಮಕ ಶಕ್ತಿ ಮಗುವಿನ ಮೇಲೆ ನೇರವಾಗಿ ಪ್ರಭಾವ ಬೀರುವ ಸಾಧ್ಯತೆ ಇರುತ್ತದೆ ಎಂದು ನಂಬಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ