ಸಿಗ್ನಲ್‍ನಲ್ಲಿ ದಾರಿ ಬಿಡದಿದ್ದಕ್ಕೆ ಕಾರಿನಲ್ಲಿದ್ದ ಯುವತಿಗೆ ರೇಪ್ ಮಾಡುವುದಾಗಿ ಬೆದರಿಕೆಯೊಡ್ಡಿದ ಸವಾರ
ಸೋಮವಾರ, 1 ಅಕ್ಟೋಬರ್ 2018 (08:51 IST)
ಬೆಂಗಳೂರು : ಸಿಗ್ನಲ್‍ನಲ್ಲಿ ದಾರಿ ಬಿಡದಿದ್ದಕ್ಕೆ ಕಾರಿನಲ್ಲಿದ್ದ ಯುವತಿಯೊಬ್ಬಳಿಗೆ ಸ್ಕೂಟಿಯಲ್ಲಿದ್ದ ಸವಾರನೊಬ್ಬ ರೇಪ್ ಮಾಡುವುದಾಗಿ ಬೆದರಿಕೆಯೊಡ್ಡಿದ ಘಟನೆ ಬೆಂಗಳೂರಿನ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್‍ನಲ್ಲಿ ನಡೆದಿದೆ.
ಫೋಟೋಗ್ರಾಫರ್ ಆಗಿ ಕೆಲಸ ಮಾಡುತ್ತಿರುವ 26 ವರ್ಷದ ಯುವತಿ ಜಿಮ್‍ನಿಂದ ಬರುತ್ತಿದ್ದ ವೇಳೆ ತಿಲಕನಗರದ ಬಿಲಾಲ್ ಮಸೀದಿ ಬಳಿಯ ಸಿಗ್ನಲ್‍ನಲ್ಲಿ ರೆಡ್ ಲೈಟ್ ಬಿದ್ದಿದ್ದರಿಂದ ಕಾರು ನಿಲ್ಲಿಸಿದ್ದಾರೆ. ಆಗ ಕಾರಿನ ಹಿಂದೆ ನಿಂತಿದ್ದ ಸ್ಕೂಟಿ ಸವಾರ ಹಾರ್ನ್ ಹಾಕಿ, ದಾರಿ ಬಿಡುವಂತೆ ಕೇಳಿದ್ದಾನೆ. ಆದರೆ ಯುವತಿ ದಾರಿ ಬಿಡಲಿಲ್ಲ. ಇದರಿಂದ ಕೋಪಗೊಂಡ ಸವಾರ ಕಾರ್ ಬಳಿಗೆ ಬಂದು ಸಿಗ್ನಲ್ ಜಂಪ್ ಮಾಡು ಇಲ್ಲಾ ಅಂದ್ರೆ ನಾನು ರೇಪ್ ಮಾಡ್ತೇನೆ ಎಂದು ಬೆದರಿಕೆಯೊಡ್ಡಿದ್ದಾನೆ.
ಆ ವೇಳೆ ಕಾರಿನ ಕ್ಯಾಮೆರಾದಲ್ಲಿ ಸವಾರನ ಫೋಟೋ ತೆಗೆದುಕೊಂಡ ಯುವತಿ, ತನಗಾದ ಅನ್ಯಾಯದ ಕುರಿತು ಬರೆದು ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ತಪ್ಪಿತಸ್ಥನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಅಂತಾ ಯುವತಿ ತಿಲಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ.
ದೂರಿನ ಹಿನ್ನೆಲೆಯಲ್ಲಿ ಸವಾರನನ್ನು ತಿಲಕನಗರ ಪೊಲೀಸರು ಠಾಣೆಗೆ ಕರೆಸಿದ್ದಾರೆ. ವಿಚಾರಣೆ ವೇಳೆ, ದಾರಿ ಬಿಡುವಂತೆ ಕೇಳಿದ್ದು ನಿಜ. ಆಕೆಯೇ ನನಗೆ ಮೊದಲು ಅವಾಚ್ಯ ಶಬ್ಧದಿಂದ ಬೈದಿದ್ದಾಳೆ. ನಾನು ಯಾವುದೇ ಅವಾಚ್ಯ ಶಬ್ಧದಿಂದ ಬೈದಿಲ್ಲ ಎಂದು ಹೇಳಿದ್ದಾನೆ.
ಇಬ್ಬರ ಆರೋಪಗಳನ್ನು ಆಲಿಸಿದ ಬಳಿಕ ಪ್ರಕರಣ ದಾಖಲಿಸಿಕೊಳ್ಳದೇ ರಾಜಿ ಸಂಧಾನ ಮಾಡಿಸಿ ಕಳುಹಿಸಿಕೊಟ್ಟಿದ್ದಾರೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್ ಲೋಡ್ ಮಾಡಿಕೊಳ್ಳಿ