ರಾತ್ರೋರಾತ್ರಿ 700 ಅಧಿಕಾರಿಗಳನ್ನು, ನೌಕರರನ್ನು ವರ್ಗಾವಣೆ ಮಾಡಿದ ಸಚಿವ ಹೆಚ್.ಡಿ ರೇವಣ್ಣ

ಸೋಮವಾರ, 1 ಅಕ್ಟೋಬರ್ 2018 (12:21 IST)
ಬೆಂಗಳೂರು  : ರಾತ್ರೋರಾತ್ರಿ 700 ಅಧಿಕಾರಿಗಳನ್ನು, ನೌಕರರನ್ನು ಏಕಾಏಕಿ ವರ್ಗಾವಣೆ ಮಾಡುವುದರ ಮೂಲಕ ಲೋಕೋಪಯೋಗಿ ಸಚಿವ ಹೆಚ್.ಡಿ ರೇವಣ್ಣ ಬಿಗ್ ಶಾಕ್ ನೀಡಿದ್ದಾರೆ.


ಎಂಜಿನಿಯರ್ ಅಧಿಕಾರಿಗಳಿಂದ ಹಿಡಿದು, ಪ್ರಥಮ ದರ್ಜೆ ಸಹಾಯಕವರೆಗಿನ ನೌಕರರನ್ನು ವರ್ಗಾ ಮಾಡಲಾಗಿದೆ. ನೌಕರರನ್ನು ವರ್ಗಾವಣೆಗೊಳಿಸಿ ಶನಿವಾರ ಮಧ್ಯರಾತ್ರಿ ಆದೇಶ ಹೊರಡಿಸಿರುವುದಾಗಿ ಮಾಹಿತಿ ಲಭ್ಯವಾಗಿದೆ.


ರೇವಣ್ನ ತಾವು ಸಚಿವರಾದ ನಂತರ ಲೋಕೋಪಯೋಗಿ ಇಲಾಖೆಯಲ್ಲಿ 270 ಕ್ಕೂ ಹೆಚ್ಚು ವರ್ಗಾವಣೆಯನ್ನು ಇತ್ತೀಚಿಗೆ ಮಾಡಲಾಗಿತ್ತು. ಲೋಕೋಪಯೋಗಿ ಇಲಾಖೆ ಒಂದರಲ್ಲೇ ವರ್ಗಾವಣೆ ಸಂಬಂಧ ಸುಮಾರು 500 ಕ್ಕೂ ಹೆಚ್ಚು ಶಿಫಾರಸ್ಸು ಪತ್ರಗಳು ಬಂದಿದ್ದವು ಎನ್ನಲಾಗಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ