ಸಂಜೆ ಹೊತ್ತಲ್ಲಿ ಕೆಟ್ಟ ವಿಷಯಗಳ ಬಗ್ಗೆ ಮಾತನಾಡಬಾರದು ಎಂದು ಹಿರಿಯರು ಹೇಳೊದ್ಯಾಕೆ ಗೊತ್ತಾ ...?

ಶನಿವಾರ, 19 ಮೇ 2018 (06:26 IST)
ಬೆಂಗಳೂರು : ಯಾವುದೇ ಕೆಟ್ಟ ವಿಷಯಗಳನ್ನು ಮಾತನಾಡುವಾಗ ಎಚ್ಚರಿಕೆಯಿಂದ ಇರಬೇಕು ಎಂದು ಹಿರಿಯರು ಹೇಳುತ್ತಾರೆ. ಅವರು ಯಾಕೆ ಹಾಗೇ ಹೇಳುತ್ತಾರೆ ಎಂಬ ವಿಷಯ ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಅದಕ್ಕೆ ಕಾರಣ ಇಲ್ಲಿದೆ ನೋಡಿ.


ಸಂಧ್ಯಾ ಸಮಯದಲ್ಲಿ ತಾಥಸ್ತು ದೇವತೆಗಳು ಸಂಚಾರಿಸುತ್ತಿರುತ್ತಾರೆ ಎಂದು ಹೇಳಲಾಗುತ್ತದೆ. ಮನುಷ್ಯ ತನ್ನ ಧರ್ಮಕ್ಕೆ ವಿರುದ್ಧವಾಗಿ ಯಾವುದೇ ಮಾತುಗಳನ್ನು ಆಡಬಾರದು. ಹಾಗೇ ಮಾಡಿದರೆ ದೇವತೆಗಳು ತಥಾಸ್ತು ಎಂದು ಹೇಳುತ್ತಾರೆ. ಅದಕ್ಕೆ ನೆಗೆಟಿವ್ ಆಗಿ ನಮ್ಮಲ್ಲಿ ನಾವೇ ಯೋಚಿಸುವ ಯೋಚನೆಗಳು ಸಹ ಒಮ್ಮೊಮ್ಮೆ ಆಗಿಬಿಡುತ್ತವೆ. ಕೆಟ್ಟ ಮಾತುಗಳು ಅಥವಾ ಕೆಟ್ಟ ಆಲೋಚನೆಗಳು ಪದೇ ಪದೇ ಪುನರಾವರ್ತನೆ ಮಾಡುತ್ತಿದ್ದಾರೆ. ಆ ಮಾತುಗಳೇ ನಡೆದುಹೋಗಿ ಬಿಡುತ್ತದೆಯಂತೆ. ಈ ತಥಾಸ್ತು ಎನ್ನುವುದು ಸ್ವ ವಿಷಯದಲ್ಲಿ ನಡೆಯುತ್ತದೆ.


ಕೆಲವರು ತಮ್ಮ ಬಳಿ ಹಣವಿದ್ದರೂ ಯಾವಾಗಲೂ ಇಲ್ಲ ಎಂದು ಹೇಳುತ್ತಿರುತ್ತಾರೆ. ಹಾಗೆಯೇ ಆರೋಗ್ಯ ಸರಿಯಿಲ್ಲ ಎಂದು ಸುಮ್ಮನೇ ಅನ್ನುತ್ತಿರುತ್ತಾರೆ. ಅಂತಹ ಮಾತುಗಳಿಂದ ತಥಾಸ್ತು ದೇವತೆಗಳು ತಥಾಸ್ತು ಅಂದರೆ ನಿಜವಾಗಿ ನಡೆದು ಬಿಡುತ್ತವೆ. ಹಾಗಾಗಿ ನಿಮ್ಮನ್ನು ಯಾರಾದರೂ ಹಣ ಕೇಳಿದರೆ ಕೊಡಲು ಇಷ್ಟವಿಲ್ಲದಿದ್ದರೆ ಕೊಡಲು ಆಗುವುದಿಲ್ಲ ಎಂದು ತಿಳಿಹೇಳಿ. ಅಷ್ಟೇ ಹೊರತು ಹೀಗೆ ನಿಮ್ಮ ಬಗ್ಗೆ ನೀವು ಕೀಳಾಗಿ ಹೇಳಿಕೊಳ್ಳಬೇಡಿ. ಹಾಗಾಗಿ ತನಗಿರುವ ಸ್ಥಿತಿಯ ಬಗ್ಗೆ ಸುಳ್ಳು ಹೇಳುವುದು ಒಳ್ಳೆಯದಲ್ಲ. ಯಾವಾಗಲೂ ಸತ್ಯವನ್ನು ಹೇಳಬೇಕು ಎಂದು ಆಧ್ಯಾತ್ಮಿಕ ಪಂಡಿತರು ಹೇಳಿದ್ದಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ