ರಾಶಿಗನುಗುಣವಾಗಿ ದುರ್ಗೆಯ ಯಾವ ರೂಪವನ್ನು ಪೂಜೆ ಮಾಡಿದ್ರೆ ಶುಭ ಗೊತ್ತೇ?

ಸೋಮವಾರ, 25 ಫೆಬ್ರವರಿ 2019 (06:40 IST)

ಬೆಂಗಳೂರು : ಶಕ್ತಿ ಸ್ವರೂಪಳಾದ ದುರ್ಗೆಗೆ ಹಲವು ರೂಪ. ಆಕೆಯನ್ನು ಪೂಜಿಸಿದರೆ ಜೀವನದಲ್ಲಿ ಎದುರಾಗುವ ಕಷ್ಟಗಳನ್ನು ಎದುರಿಸುವ ಶಕ್ತಿ ನೀಡುತ್ತಾಳೆ ಎಂದು ಹೇಳುತ್ತಾರೆ. ಆದ್ದರಿಂದ ಭಕ್ತರಾದವರು ತಮ್ಮ ರಾಶಿಗನುಗುಣವಾಗಿ ತಾಯಿಯ ಯಾವ ರೂಪವನ್ನು ಪೂಜೆ ಮಾಡಿದ್ರೆ ಹೆಚ್ಚಿನ ಶುಭ ಫಲ ಪ್ರಾಪ್ತಿಯಾಗುತ್ತದೆ ಎಂಬುದನ್ನು ತಿಳಿದುಕೊಳ್ಳಿ.

 

ಮೇಷ : ಮೇಷ ರಾಶಿಯವರು ಸ್ಕಂದ ಮಾತೆಯನ್ನು ಪೂಜೆ ಮಾಡಿದ್ರೆ ಆದಷ್ಟು ಬೇಗ ಅವರ ಕಷ್ಟ ಕರಗಿ ಆಸೆಗಳು ಈಡೇರಲಿವೆ.

ವೃಷಭ : ಈ ರಾಶಿಯವರು ತಾಯಿ ದುರ್ಗೆಯ ಮಹಾಗೌರಿ ರೂಪವನ್ನು ಪೂಜೆ ಮಾಡುವುದು ಶುಭ.

 

ಮಿಥುನ : ಮಿಥುನ ರಾಶಿಯವರು ಬ್ರಹ್ಮಚಾರಿಣಿಯ ಉಪಾಸನೆ ಮಾಡಬೇಕು. ತಾಯಿ ಬ್ರಹ್ಮಚಾರಿಣಿ ಜ್ಞಾನ, ವಿದ್ಯೆಯನ್ನು ನೀಡ್ತಾಳೆ.

 

ಕರ್ಕ : ಈ ರಾಶಿಯ ಭಕ್ತರು ಶೈಲಪುತ್ರಿಯನ್ನು ಆರಾಧನೆ ಮಾಡಬೇಕು.

 

ಸಿಂಹ : ಸಿಂಹ ರಾಶಿಯವರು ತಾಯಿ ಕೂಷ್ಮಾಂಡಾ ದೇವಿಯನ್ನು ಆರಾಧನೆ ಮಾಡಬೇಕು. ದುರ್ಗಾ ಮಂತ್ರ ಪಠಿಸಬೇಕು.

 

ಕನ್ಯಾ : ಕನ್ಯಾ ರಾಶಿಯವರು ಬ್ರಹ್ಮಚಾರಣಿಯನ್ನು ಪೂಜಿಸಬೇಕು.

 

ತುಲಾ : ಈ ರಾಶಿಯವರು ಮಹಾ ಗೌರಿಯನ್ನು ಆರಾಧನೆ ಮಾಡಿದ್ರೆ ಫಲ ಸಿದ್ಧಿಯಾಗಲಿದೆ.

ವೃಶ್ಚಿಕ : ವೃಶ್ಚಿಕ ರಾಶಿಯವರು ಸ್ಕಂದ ಮಾತೆಯನ್ನು ಪೂಜಿಸಬೇಕು.

 

ಧನು : ಧನು ರಾಶಿಯವರು ಚಂದ್ರಘಂಟೀತಿಯನ್ನು ಆರಾಧನೆ ಮಾಡಿದ್ರೆ ಶುಭ ಫಲ ಶೀಘ್ರದಲ್ಲಿ ಲಭಿಸಲಿದೆ.

 

ಮಕರ : ಈ ರಾಶಿಯವರು ಕಾಲರಾತ್ರಿ ಪೂಜೆ ಮಾಡುವುದು ಶ್ರೇಷ್ಠವೆಂದು ನಂಬಲಾಗಿದೆ.

 

ಕುಂಭ : ಕುಂಭ ರಾಶಿಯವರು ಕೂಡ ಕಾಲರಾತ್ರಿಯನ್ನು ಪೂಜೆ ಮಾಡಬೇಕು.

 

ಮೀನ : ಮೀನ ರಾಶಿಯವರು ಚಂದ್ರಘಂಟೀತಿಯ ಪೂಜೆ ಮಾಡಬೇಕು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ