ಬೇಸಿಗೆಯಲ್ಲಿ ಬಾದಾಮಿ ತಿನ್ನುವುದು ಉತ್ತಮವೇ?

ಸೋಮವಾರ, 25 ಫೆಬ್ರವರಿ 2019 (06:37 IST)
ಬೆಂಗಳೂರು : ಬಾದಾಮಿಯಲ್ಲಿ  ಪ್ರೋಟೀನ್, ಫೈಬರ್, ವಿಟಾಮಿನ್ ಇ, ಒಮೇಗಾ3, ಹಾಗೂ ಒಮೇಗಾ 6, ಫ್ಯಾಟಿ ಆಸಿಡ್, ಕ್ಯಾಲ್ಸಿಯಂ, ಜಿಂಕ್ ಇರುವುದರಿಂದ ಇದು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಆದರೆ ಇದನ್ನು ಬೇಸಿಗೆಯಲ್ಲಿ ತಿನ್ನಬಾರದು ಎಂದು ವೈದ್ಯರು ಹೇಳುತ್ತಾರೆ.

ಹೌದು. ಬೇಸಿಗೆಯಲ್ಲಿ ಕಚ್ಚಾ ಬಾದಾಮಿಯನ್ನು ಅಂದರೆ ನೆನೆಸಿರದ ಬಾದಾಮಿಯನ್ನು ತಿಂದರೆ ಅದು ದೇಹದಲ್ಲಿ ಉಷ್ಣತೆಯನ್ನು ಹೆಚ್ಚಿಸುತ್ತದೆ. ಜೀರ್ಣಕ್ರಿಯೆಯಲ್ಲಿ ಅಡೆತಡೆ ಉಂಟು ಮಾಡುತ್ತವೆ. ಅಲ್ಲದೇ, ಪೈಲ್ಸ್ ಮುಂತಾದ ಸಮಸ್ಯೆಗಳಿಗೂ ಕಾರಣವಾಗಬಹುದು.

 

ಆದ್ದರಿಂದ ಬೇಸಿಗೆಯಲ್ಲಿ ಬಾದಾಮಿಯನ್ನು 8 ರಿಂದ 12 ಗಂಟೆಗಳ ಕಾಲ ನೀರಿನಲ್ಲಿ ನೆನೆಸಿ ನಂತರ ಸಿಪ್ಪೆ ತೆಗೆದು ತಿಂದರೆ ಉತ್ತಮವೆನ್ನುತ್ತಾರೆ ವೈದ್ಯರು.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ