ಬೆಂಗಳೂರು : ರಾತ್ರಿ ನಿದ್ದೆಯಲ್ಲಿ ಕನಸು ಬೀಳುತ್ತದೆ. ಈ ಕನಸು ಮುಂದೆ ನಡೆಯುವ ಘಟನೆಯ ಬಗ್ಗೆ ತಿಳಿಸುತ್ತದೆ ಎಂದು ಹೇಳುತ್ತಾರೆ. ಅದೇರೀತಿ ಕೆಲವೊಂದು ಕನಸು ಧನ ಲಾಭದ ಸೂಚನೆಯನ್ನು ನೀಡುತ್ತದೆಯಂತೆ. ಇಂಥ ಕನಸುಗಳು ಬಿದ್ದರೆ ಧನಲಾಭವಾಗುತ್ತದೆಯಂತೆ.
ಸ್ವಪ್ನದಲ್ಲಿ ಬೆಂಕಿ ಪೊಟ್ಟಣದಿಂದ ಬೆಂಕಿ ಹಚ್ಚಿದಂತೆ ಕಂಡು ಬಂದಲ್ಲಿ ಶೀಘ್ರದಲ್ಲಿಯೇ ಧನ ಲಾಭವಾಗಲಿದೆ ಎಂದರ್ಥ. ಹಾಗೇ ಕನಸಿನಲ್ಲಿ ಯಾರಿಗಾದ್ರೂ ಹಣ ನೀಡಿದಂತೆ ಕಂಡು ಬಂದಲ್ಲಿ ಆದಷ್ಟು ಬೇಗ ನೀವು ನೀಡಿದ ಸಾಲ ನಿಮಗೆ ವಾಪಸ್ ಬರಲಿದೆ. ಕನಸಿನಲ್ಲಿ ಚೆಕ್ ನೀಡಿದಂತೆ ಕಂಡು ಬಂದಲ್ಲಿ ವಾಸ್ತವದಲ್ಲಿ ಹಣ ಪ್ರಾಪ್ತಿಯಾಗುತ್ತದೆ.
ಕುಂಬಾರ ಮಡಿಕೆ ಮಾಡಿದಂತೆ ಕನಸು ಬಿದ್ದಲ್ಲಿ ಧನ ಲಾಭದ ಯೋಗವಿದೆ ಎಂದರ್ಥವಂತೆ. ಕನಸಿನಲ್ಲಿ ಹೂ ಹಾಗೂ ಹಣ್ಣನ್ನು ತಿಂದಂತೆ ಕಂಡು ಬಂದಲ್ಲಿ ಕೂಡ ಧನ ಲಾಭವಾಗುತ್ತದೆ ಎಂದರ್ಥ. ಕನಸಿನಲ್ಲಿ ಚಿನ್ನ ಅಥವಾ ಅಮೂಲ್ಯ ವಸ್ತು ಕಂಡಲ್ಲಿ ಇದ್ದಕ್ಕಿದ್ದಂತೆ ಹಣ ಸಿಗಲಿದೆ ಎಂಬುದರ ಸಂಕೇತ.