ಬೇಸಿಗೆ ಕಾಲದಲ್ಲಿ ದೇಹಕ್ಕೆ ತಂಪು ನೀಡುವ ಈ ಪಾನೀಯವನ್ನು ಒಟ್ಟಿಗೆ ಸೇವಿಸಬೇಡಿ

ಗುರುವಾರ, 30 ಮೇ 2019 (06:55 IST)
ಬೆಂಗಳೂರು : ಬೇಸಿಗೆ ಕಾಲದಲ್ಲಿ ಬಿಸಿಲಿನ ತಾಪಕ್ಕೆ ತಂಪು ಪಾನೀಯಗಳನ್ನು ಕುಡಿದರೆ ದೇಹಕ್ಕೆ ಹಿತವೆನಿಸುತ್ತದೆ. ಆದರೆ ಈ ಪಾನೀಯ ಸೇವನೆಗೂ ಒಂದು ನಿಯಮವಿದೆ. ಕೆಲವು ಪಾನೀಯಗಳನ್ನು ಒಂದೇ ದಿನದಲ್ಲಿ ಒಟ್ಟಿಗೆ ಸೇವಿಸಿದರೆ ಆರೋಗ್ಯ ಹಾಳಾಗುತ್ತದೆ.



ಹೌದು. ಮಾವಿನ ಜ್ಯೂಸ್ ಕುಡಿಯುವುದರಿಂದ ಬೇಸಿಗೆಯಲ್ಲಿ ಹೊಟ್ಟೆ ತಂಪಾಗಿರುತ್ತದೆ. ಎಸಿಡಿಟಿ ಆಗೋದಿಲ್ಲ. ಆಹಾರ ಸೇವನೆ ನಂತರ ಇದನ್ನು ಕುಡಿಯೋದು ಒಳ್ಳೆಯದು. ಹಾಗೇ ಮಜ್ಜಿಗೆ ದೇಹವನ್ನು ತಂಪಾಗಿಸುವ ಜೊತೆಗೆ ತೂಕ ಇಳಿಸಲು ಸಹಕಾರಿ.

 

ಮಾವಿನ ಜ್ಯೂಸ್ ಹಾಗೂ ಮಜ್ಜಿಗೆ ಎರಡನ್ನು ಒಟ್ಟಿಗೆ ಅಥವಾ ಒಂದೇ ದಿನ ಸೇವನೆ ಮಾಡುವುದರಿಂದ ದೇಹದಲ್ಲಿ ಆಮ್ಲ ಪ್ರಮಾಣ ಹೆಚ್ಚಾಗಿ ಟಾಕ್ಸಿನ್ ಉತ್ಪತ್ತಿಯಾಗುತ್ತದೆ. ಇದು ಆರೋಗ್ಯಕ್ಕೆ ಹಾನಿಯುಂಟು ಮಾಡುತ್ತದೆ.

 

 

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ