ಪೂಜೆ ಮುಗಿದ ಮೇಲೆ ಕಳಸದ ಮೇಲಿಟ್ಟ ತೆಂಗಿನಕಾಯಿಯನ್ನು ಏನು ಮಾಡಬೇಕು ಗೊತ್ತಾ?

ಸೋಮವಾರ, 30 ಜುಲೈ 2018 (06:41 IST)
ಬೆಂಗಳೂರು : ನಮ್ಮ ಸಂಪ್ರದಾಯದಲ್ಲಿ ವರಮಹಾಲಕ್ಷ್ಮೀ ಪೂಜೆ, ತುಳಸಿ ಪೂಜೆ ಮುಂತಾದ ಪೂಜೆ ಗಳನ್ನು ಮಾಡುವಾಗ ಕಳಸದ ಮೇಲೆ ತೆಂಗಿನಕಾಯಿ ಇಟ್ಟು ಪೂಜೆ ಮಾಡುತ್ತೇವೆ. ಆದರೆ ಪೂಜೆ ಮುಗಿದ ಬಳಿಕ ಆ ತೆಂಗಿನಕಾಯಿಯನ್ನು ಏನು ಮಾಡುವುದು ಎಂಬ  ಸಂದೇಹ ತುಂಬ ಜನರಿಗೆ ಇರುತ್ತದೆ.


ಕಳಸದ ತೆಂಗಿನಕಾಯಿ ದೇವರ ಸ್ವರೂಪವಾದ್ದರಿಂದ ಪೂಜೆ ಮಾಡಿದ ಬಳಿಕ ಆ ತೆಂಗಿನಕಾಯಿಯನ್ನು ಸಿಹಿ ಪದಾರ್ಥಗಳಿಗೆ ಮಾತ್ರ ಬಳಸಬೇಕಂತೆ. ನಂತರ ಆ ಸಿಹಿಪದಾರ್ಥವನ್ನು ಎಲ್ಲರಿಗೂ ಹಂಚಿ ಕೊನೆಗೆ ನಾವು ಸ್ವೀಕರಿಸಿದರೆ ಆ ಪೂಜೆ ಪರಿಪೂರ್ಣಗೊಂಡು  ಫಲ ಸಿಗುತ್ತದೆಯಂತೆ. ಆದರೆ ಆ ತೆಂಗಿನಕಾಯಿಯನ್ನು ಯಾವುದೇ ಕಾರಣಕ್ಕೂ ಚಟ್ನಿ, ಸಾಂಬಾರಿಗೆ ಬಳಸಬಾರದಂತೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ