ಕಾರ್ತಿಕ ಮಾಸದಲ್ಲಿ ದೀಪ ಬೆಳಗುವಾಗ ಕೂದಲು ಕಟ್ಟಿರಬೇಕು. ಕೂದಲು ಬಿಚ್ಚಿಕೊಂಡಿರಬಾರದು. ಹಾಗೇ ಪೂರ್ವ ಅಥವಾ ಪಶ್ಚಿಮ ದಿಕ್ಕಿಗೆ ಮುಖ ಮಾಡಿ ದೀಪ ಬೆಳಗಬೇಕು.
ಸಾಸಿವೆ ಎಣ್ಣೆ ದೀಪವನ್ನು ಬೆಳಗಬಾರದು. ಎಳ್ಳು ಅಥವಾ ತುಪ್ಪದ ದೀಪ ಹಚ್ಚಬೇಕು. ದೀಪವನ್ನು ಬಾಯಿಯಿಂದ ಊದಿ ಆರಿಸಬಾರದು. ಆರಿಸುವ ಅವಶ್ಯಕತೆ ಇದ್ದಾಗ ಬಟ್ಟೆಯ ಮೂಲಕ ಗಾಳಿ ಬೀಸಿ ಆರಿಸಬೇಕು.