ಸಿಎಂ ಬಿಎಸ್ ವೈ ಆಡಿಯೋ ಲೀಕ್; ಆಂತರಿಕ ತನಿಖೆಗೆ ಸಮಿತಿ ರಚನೆ ವಿಳಂಬವಾಗುತ್ತಿರುವುದೇಕೆ?

ಬುಧವಾರ, 6 ನವೆಂಬರ್ 2019 (11:28 IST)
ಬೆಂಗಳೂರು : ಅಪರೇಷನ್ ಕಮಲದ  ಬಗ್ಗೆ ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿದ ಆಡಿಯೋ ವೈರಲ್ ಆದ ಕಾರಣ ಈ ಬಗ್ಗೆ ಆಂತರಿಕ ತನಿಖೆ ನಡೆಸುವುದಾಗಿ ಹೇಳಿದ ಬಿಜೆಪಿ ಇದೀಗ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.




ಹೌದು. ಸಿಎಂ ಬಿ.ಎಸ್ ಯಡಿಯೂರಪ್ಪ ಅವರು ಮಾತನಾಡಿದ ಆಡಿಯೋ ಕಾಂಗ್ರೆಸ್ ನವರಿಗೆ ಹೇಗೆ ಸಿಕ್ಕಿದೆ? ಇದನ್ನು ಮಾಡಿದವರು ಯಾರು ಎಂಬ ಬಗ್ಗೆ ಮಾಹಿತಿ ಕಲೆ ಹಾಕಲು ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಸಮಿತಿ ರಚಿಸಿ ಆತಂರಿಕ ತನಿಖೆ ನಡೆಸುವುದಾಗಿ ಹೇಳಿದ್ದರು.


ಆದರೆ ಇದೀಗ ನಾಲ್ಕೈದು ದಿನ ಕಳೆದರೂ ಇನ್ನೂ  ಆಂತರಿಕ ತನಿಖೆ ನಡೆಸಲು ಸಮಿತಿ ರಚನೆಯಾಗದ ಹಿನ್ನಲೆಯಲ್ಲಿ ಇದರಿಂದ ಬಿಜೆಪಿ ನಾಯಕರ ಹೆಸರು ಬಹಿರಂಗವಾಗಲಿದ್ದು, ಪಕ್ಷ ಮಾರ್ಯಾದೆ ಹೋಗುತ್ತದೆ ಎಂಬ ಕಾರಣಕ್ಕೆ ಸಮಿತಿ ರಚಿಸಲು ಹಿಂದೇಟು ಹಾಕಲಾಗಿದೆ ಎನ್ನಲಾಗಿದೆ. ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಇದೀಗ ದೇಹಲಿಯಲ್ಲಿದ್ದು, ಅವರು ಮರಳಿದ ಬಳಿಕ ಈ ಬಗ್ಗೆ ತೀರ್ಮಾನಿಸಲಿದ್ದಾರೆ ಎನ್ನಲಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ