ಹೊಸ್ತಿಲ ಬಳಿ ಇಂತಹ ಕೆಲಸವನ್ನು ಮಾಡಿದರೆ ಮಹಾ ಪಾಪವಂತೆ!

ಬುಧವಾರ, 17 ಜನವರಿ 2018 (06:42 IST)
ಬೆಂಗಳೂರು : ಎಲ್ಲರ ಮನೆಯಲ್ಲೂ ಬಾಗಿಲಿಗೆ ಹೊಸ್ತಿಲುಗಳು ಇರುತ್ತದೆ. ಅದರಲ್ಲೂ ಮೂಖ್ಯ ದ್ವಾರದಲ್ಲಿ ಹೊಸ್ತಿಲುಗಳು ಖಂಡಿತ  ಇದ್ದೆ ಇರುತ್ತದೆ. ಈ ಹೊಸ್ತಿಲುಗಳಲ್ಲಿ ಲಕ್ಷ್ಮೀ ದೇವಿ ನೆಲೆಸಿರುತ್ತಾಳೆ ಎಂದು ಪಂಡಿತರು ಹೇಳುತ್ತಾರೆ. ಅದಕ್ಕಾಗಿ ಮುಂಜಾನೆ ಹೊಸ್ತಿಲುಗಳನ್ನು  ತೊಳೆದು  ಅರಶಿನ ಕುಂಕುಮ ಹಚ್ಚಿ ಪ್ರತ್ಯೇಕವಾಗಿ ಪೂಜೆಗಳನ್ನು ಮಾಡುತ್ತಾರೆ.  ಆದ್ದರಿಂದ ಹೊಸ್ತಿಲ ಬಳಿ ಕೆಲವೊಂದು ಕೆಲಸಗಳನ್ನು  ಮಾಡಬಾರದು. ಒಂದುವೇಳೆ ಮಾಡಿದರೆ ಅದು ಘೋರವಾದ ಅಪರಾಧ ಮಾಡಿದಂತೆ. ಇದಕ್ಕೆ ನರಕದಲ್ಲೂ ಕೂಡ ಕಠಿಣ ಶಿಕ್ಷೆಗಳನ್ನು ವಿಧಿಸುವುದಲ್ಲದೆ ಜನ್ಮ ಜನ್ಮದಲೂ ಆ ಪಾಪ ಪರಿಹಾರವಾಗುದಿಲ್ಲ ಎಂದು ಋಷಿಮುನಿಗಳು ಹೇಳುತ್ತಾರೆ. ಆ ಕೆಲಸಗಳು ಯಾವುದೆಂದು ಮೊದಲು ತಿಳಿಯೋಣ.



ಹೊಸ್ತಿಲ ಬಳಿ ಪಾದರಕ್ಷೆಗಳನ್ನು ಇಡುವುದು, ಪಾದರಕ್ಷೆ ಹಾಕಿಕೊಂಡೆ ಹೊಸ್ತಿಲ ಮೇಲೆ ನಿಲ್ಲುವುದು. ಹಾಗೆ ಬರಿಗಾಲಲ್ಲಿ ಹೊಸ್ತಿಲ ಮೇಲೆ ನಿಲ್ಲುವುದು,  ಅದನ್ನು ತುಳಿಯುವುದು ಮಾಡಬಾರದಂತೆ ಇದು ಘೋರ ಪಾಪವಂತೆ. ಏಕೆಂದರೆ ಅದು ಲಕ್ಷ್ಮೀದೇವಿಯ ವಾಸಸ್ಥಳವಾಗಿದೆ. ಹೊಸ್ತಿಲ ಕೆಳಗೆ ಲಕ್ಷ್ಮೀ, ಮೇಲಗಡೆ ಗೌರಿ ನೆಲೆಸಿರುವುದರಿಂದ ಹೀಗೆ ಮಾಡದರೆ ಮಹಾ ಪಾಪ  ಎಂದು ಪಂಡಿತರು ಹೇಳುತ್ತಾರೆ.



ಹೊಸ್ತಿಲ ಬಳಿ ಪೊರಕೆಯನ್ನು ಕೂಡ ಇಡಬಾರದು ಹಾಗೆ ಪೊರಕೆಯಿಂದ ಹೊಸ್ತಿಲನ್ನು ಗುಡಿಸಬಾರದಂತೆ. ಇದರಿಂದ ಲಕ್ಷ್ಮೀದೇವಿ ಕೋಪಗೊಂಡು ಮನೆಯಿಂದ ಹೊರಟುಹೋಗುತ್ತಾಳೆ ಎಂದು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ