ಪುರುಷರ ಆಯಿಲ್ ಸ್ಕಿನ್ ಗೆ ಇಲ್ಲಿದೆ ಮನೆಮದ್ದು

ಮಂಗಳವಾರ, 16 ಜನವರಿ 2018 (07:56 IST)
ಬೆಂಗಳೂರು : ತ್ವಚೆಯ ಸಮಸ್ಯೆ ಕೇವಲ ಮಹಿಳೆಯರಿಗೆ ಮಾತ್ರವಲ್ಲ ಪುರುಷರಲ್ಲೂ ಕಾಣಿಸಿಕೊಳ್ಳುತ್ತದೆ. ಪುರುಷರು ತಮ್ಮ ತ್ವಚೆಯ ಬಗ್ಗೆ ಹೆಚ್ಚು ಕಾಳಜಿ ವಹಿಸದೆ ಇರುವುದೇ ಇದಕ್ಕೆ ಕಾರಣ. ನೂರರಲ್ಲಿ ಹತ್ತು ಮಂದಿ ಪುರುಷರು ಮಾತ್ರ ತಮ್ಮ ತ್ವಚೆಯ ಆರೈಕೆ ಮಾಡಿಕೊಳ್ಳುವರು. ಇದರಿಂದಾಗಿ ಮೊಡವೆ, ಸ್ಕಿನ್ ಅಲರ್ಜಿ ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಇದಕ್ಕೆ ಮನೆಯಲ್ಲೇ ಫೇಸ್ ಪ್ಯಾಕ್ ಗಳನ್ನು ಮಾಡಿಕೊಳ್ಳಬಹುದು. ಇದರಿಂದ ಅವರ ಆಯಿಲ್ ಸ್ಕಿನ್ ಸಮಸ್ಯೆ ನಿವಾರಣೆಯಾಗುತ್ತದೆ.

 
1 ಚಮಚ ಆಪಲ್  ಸೀಡರ್  ವಿನೇಗರ್ ಹಾಗು 3 ಚಮಚ ಡಿಸ್ಟಿಲ್ ವಾಟರ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಹತ್ತಿಉಂಡೆಯ ಸಹಾಯದಿಂದ ಮುಖಕ್ಕೆ ಹಚ್ಚಿಕೊಳ್ಳಿ. ಇದನ್ನು ದಿನಕ್ಕೆ 2 ಬಾರಿ ಅಂದರೆ ಮನೆಯಿಂದ ಹೊರಗೆ ಹೋಗುವಾಗ ಹಾಗು ರಾತ್ರಿ ಮಲಗುವ ಮೊದಲು ಹಚ್ಚಿಕೊಳ್ಳಿ.

 
1 ಚಮಚ ರೋಸ್ ವಾಟರ್ ಗೆ 1 ಚಿಟಿಕೆ ಬೆಂಟೋನೈಟ್ ಕ್ಲೇ ಬೆರೆಸಿಕೊಂಡು ಸ್ನಾನಕ್ಕೆ ಮೊದಲು ಮುಖಕ್ಕೆ ಈ ಫೇಸ್ ಪ್ಯಾಕ್ ಹಚ್ಚಿಕೊಳ್ಳಿ . 15 ನಿಮಿಷ ಬಿಟ್ಟು ಮುಖ ತೊಳೆದುಕೊಳ್ಳಿ . ಈ ಫೇಸ್ ಪ್ಯಾಕ್ ಚರ್ಮದ ರಂಧ್ರಗಳನ್ನು ಮುಚ್ಚಿಹಾಕಿ ಎಣ್ಣೆ ಹೊರಬರದಂತೆ ತಡೆಯುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ