Horoscope 2025: ಮೀನ ರಾಶಿಯವರು 2025 ರಲ್ಲಿ ಮಾನಸಿಕ ಆರೋಗ್ಯದ ಬಗ್ಗೆ ಗಮನಹರಿಸಿ

Krishnaveni K

ಶನಿವಾರ, 23 ನವೆಂಬರ್ 2024 (10:26 IST)
ಬೆಂಗಳೂರು: ಮೀನ ರಾಶಿಯವರಿಗೆ 2025 ರಲ್ಲಿ ದೈಹಿಕ ಆರೋಗ್ಯ ಕಾಪಾಡಿಕೊಳ್ಳಲು ಮಾನಸಿಕವಾಗಿ ಸ್ವಾಸ್ಥ್ಯ ಮತ್ತು ದೃಢತೆ ಕಾಪಾಡಿಕೊಳ್ಳುವುದು ಮುಖ್ಯವಾಗುತ್ತದೆ.

ಸಾಮಾನ್ಯವಾಗಿ ಮೀನ ರಾಶಿಯವರಿಗೆ ಸಾಮಾನ್ಯವಾಗಿ ದುರ್ಬಲ ರೋಗ ನಿರೋಧಕ ಶಕ್ತಿಯಿರುತ್ತದೆ. ಈ ರಾಶಿಯವರು ಬೇಗನೇ ಶೀತ, ಸೈನಸ್, ತಲೆನೋವಿನಂತಹ ರೋಗಗಳನ್ನು ತಂದುಕೊಳ್ಳುತ್ತಾರೆ. ಈ ವರ್ಷ ಈ ರಾಶಿಯವರಿಗೆ ತಮ್ಮ ಹಳೆಯ ರೋಗಗಳು ವಾಸಿಯಾಗಲಿದೆ.

ಈ ವರ್ಷದ ಆರಂಭದಲ್ಲಿ ಮಾನಸಿಕವಾಗಿ ಗಟ್ಟಿಯಾಗಿರಬೇಕು. ಇದರಿಂದ ಯಾವುದೇ ರೋಗ ಬಾಧೆಗಳನ್ನು ದೂರ ಮಾಡುವಿರಿ. ಫೆಬ್ರವರಿ ಬಳಿಕ ನಿಮಗೆ ಬಿಪಿ, ಶುಗರ್, ಕೊಲೆಸ್ಟ್ರಾಲ್ ನಂತಹ ಸಮಸ್ಯೆ ಕಂಡುಬರಬಹುದು. ಏಪ್ರಿಲ್ ನಲ್ಲಿ ನಿಮ್ಮ ದೈಹಿಕ ಆರೋಗ್ಯ ಸುಧಾರಣೆಯಾಗುವುದು. ಆದರೆ ಮಾನಸಿಕವಾಗಿ ಆತಂಕ ಕಾಡಲಿದೆ.

ಮುಖ್ಯವಾಗಿ ಈ ವರ್ಷ ಮೃತ್ಯುಂಜಯ ಜಪ ಮಾಡುವುದು ಉತ್ತಮ. ವರ್ಷಾಂತ್ಯದಲ್ಲಿ ನಿಮ್ಮ ರೋಗ ನಿರೋಧಕ ಶಕ್ತಿ ವೃದ್ಧಿಯಾಗಿ ಆರೋಗ್ಯ ಸಮಸ್ಯೆಗಳು ನಿಧಾನವಾಗಿ ಕಡಿಮೆಯಾಗಲಿದೆ. ಇದರಿಂದ ಮಾನಸಿಕವಾಗಿಯೂ ಸಂತೋಷ ಅನುಭವಿಸಲಿದ್ದೀರಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ