ಫೆಂಗ್‌ಶ್ಯೂ ಪ್ರಕಾರ ಮನೆಯಲ್ಲಿ ಕಟ್ಟುವ ವಿಂಡ್ ಬೆಲ್ ಗಳು ಎಷ್ಟು ಇರಬೇಕು? ಯಾವ ದಿಕ್ಕಿನಲ್ಲಿ ಇರಬೇಕು ಗೊತ್ತಾ?

ಗುರುವಾರ, 27 ಸೆಪ್ಟಂಬರ್ 2018 (12:34 IST)
ಬೆಂಗಳೂರು : ಮನೆಯ ಮುಂದಿನ ಸೌಂದರ್ಯಕ್ಕಾಗಿ ಅಥವಾ ಹಿಂಪಾದ ಸಂಗೀತಕ್ಕಾಗಿ ವಿಂಡ್ ಬೆಲ್ ನ್ನು ಮನೆಯ ಮುಂದೆ ಕಟ್ಟುತ್ತಾರೆ. ಆದರೆ ಇದನ್ನು ತಮಗಿಷ್ಟ ಬಂದಂತೆ ಕಟ್ಟುವ ಹಾಗಿಲ್ಲ. ಏಕೆಂದರೆ ಇದು ಮನೆಯ ಮೇಲೆ ಪರಿಣಾಮ ಬೀರುತ್ತದೆ. ಫೆಂಗ್‌ಶ್ಯೂ ಪ್ರಕಾರ ಮನೆಯಲ್ಲಿ ಕಟ್ಟುವ ವಿಂಡ್ ಬೆಲ್ ಗಳು ಎಷ್ಟು ಇರಬೇಕು? ಯಾವ ದಿಕ್ಕಿನಲ್ಲಿ ಕಟ್ಟಬೇಕು ಎಂಬ ಮಾಹಿತಿ ಇಲ್ಲಿದೆ ನೋಡಿ.


ವಿಂಡ್ ಬೆಲ್ ನಲ್ಲಿ ತುಂಬಾ ವಿಧಗಳಿವೆ. ಅದರಲ್ಲಿ ನೀವು ಯಾವುದನ್ನು ಮನೆಯ ಮುಂದೆ ಕಟ್ಟಿದರು ಮನೆಯೊಳಗೆ ಕೆಟ್ಟ ಅಥವಾ ದುಷ್ಟ ಶಕ್ತಿಗಳು ಬರುವುದಿಲ್ಲ.


ಗಾಳಿ ಘಂಟೆಯನ್ನು ಮನೆಯ ಪಶ್ಚಿಮದಲ್ಲಿ ಕಟ್ಟಿದರೆ ಮನೆಯಲ್ಲಿ ಶುಭವಾಗುತ್ತದೆ ಹಾಗು ಉತ್ತರದಲ್ಲಿ ಕಟ್ಟಿದರೆ ಉದ್ಯಗಾವಕಾಶ ಸಿಗುತ್ತದೆ ಎಂದು ನಂಬಲಾಗಿದೆ. ಗಾಳಿ ಗಂಟೆ ಪ್ರತಿಸಲಿ ಶಬ್ದ ಮಾಡಿದಾಗಲೂ ನಿಮ್ಮ ಮನೆಯಲ್ಲಿ ದೈವಿಕ ಶಕ್ತಿ ಹೆಚ್ಚುತ್ತದೆ.


ಫೆಂಗ್‌ಶ್ಯೂ ಪ್ರಕಾರ ಇಂಥದ್ದೊಂದು ಬೆಲ್ ಮನೆನಲ್ಲಿದ್ದರೆ ಶುಭವೂ ಹೌದು. ಫೆಂಗ್‌ಶ್ಯೂ ಪ್ರಕಾರ 6,7,8 ಮತ್ತು 9 ರಾಡ್ ಜೊತೆ ಗಂಟೆಯಿರುವ ಗಾಳಿ ಗಂಟೆಯನ್ನು ಹಾಕಬೇಕು. ಇದರಿಂದ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುವುದಿಲ್ಲ.7 ಮತ್ತು 8 ರಾಡ್ ಇರುವ ಗಾಳಿಗಂಟೆ ಹಾಕುವುದರಿಂದ ಮನೆಗೆ ಸಂಪತ್ತು ಬರಲಿದೆ. 2 ರಿಂದ 9 ರಾಡ್‌ ಇರುವ ಚೈಮ್‌ನ್ನು ಲೀವಿಂಗ್‌ ರೂಮ್‌ನ ದಕ್ಷಿಣ ಪಶ್ಚಿಮ ಭಾಗದಲ್ಲಿಟ್ಟರೆ ಸಮಾಜದಲ್ಲಿ ಮನ್ನಣೆ ದೊರೆಯುತ್ತದೆ.


ಐದು ರಾಡ್ ಇರುವ ಗಾಳಿಗಂಟೆ ಮನೆಗೆ ನಕರಾತ್ಮಕ ಶಕ್ತಿ ಪ್ರವೇಶವಾಗುವ ಸಾಧ್ಯತೆ ಇದೆ. ಬಾಗಿಲಿಗೆ ತಾಗುವಂತೆ ವಿಂಡ್‌ಚೈಮ್‌ ಯಾವತ್ತೂ ಇಡಬೇಡಿ. ಅಲ್ಲದೆ ನೀವು ಕುಳಿತುಕೊಳ್ಳುವ, ಮಲಗುವ ಹಾಗೂ ಕೆಲಸ ಮಾಡುವ ಜಾಗದಲ್ಲೂ ತೂಗಿಸಬೇಡಿ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ