ನಟ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್; ಕಾರಿನಲ್ಲಿ ಇದ್ದದ್ದು ನಾಲ್ಕಲ್ಲ, ಆರು ಜನ!

ಬುಧವಾರ, 26 ಸೆಪ್ಟಂಬರ್ 2018 (14:34 IST)
ಬೆಂಗಳೂರು : ನಟ ದರ್ಶನ್ ಕಾರು ಅಪಘಾತ ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್. ಅಪಘಾತಕ್ಕೀಡಾದ ಕಾರಿನಲ್ಲಿ ಇದ್ದದ್ದು ನಾಲ್ಕಲ್ಲ, ಆರು ಜನ ಎಂಬ ಮಾಹಿತಿಯನ್ನು  ಇದೀಗ ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಸುಬ್ರಹ್ಮಣ್ಣೇಶ್ವರ್ ನೀಡಿದ್ದಾರೆ.


ನಟ ದರ್ಶನ್ ಅವರ ಕಾರು ಅಪಘಾತಕ್ಕೀಡಾದ ಸಂದರ್ಭದಲ್ಲಿ ಅದರಲ್ಲಿ ನಾಲ್ಕು ಜನರು ಪ್ರಯಾಣ ಮಾಡುತ್ತಿದ್ದರು ಎಂದು ದರ್ಶನ್ ಆಪ್ತರು ಹೇಳಿದ್ದಾರೆ. ಆದರೆ ಆಸ್ಪತ್ರೆಯ ಎಂಎಲ್ ಸಿ ವರದಿಯ ಪ್ರಕಾರ ಆರು ಜನಕ್ಕೆ ಚಿಕಿತ್ಸೆ ನೀಡಲಾಗಿದ್ದು, ನಾಲ್ವರು ಆಸ್ಪತ್ರೆಗೆ ದಾಖಲಾಗಿದ್ದಾರೆ. ಇಬ್ಬರಿಗೆ ಸಹಜ ತಪಾಸಣೆ ನೀಡಲಾಗಿದೆ. ನಂತರ ಅವರು ಆಸ್ಪತ್ರೆಯಿಂದ ನಿರ್ನಮಿಸಿದ್ದಾರೆ ಎಂದು ತಿಳಿಸಿದೆ.


ಆದರೆ ಎಫ್ ಐ ಆರ್ ನಲ್ಲಿಯೂ ಕೂಡ ಕಾರಿನಲ್ಲಿ 4 ಜನ ಇದ್ದರು ಎಂದು ಉಲ್ಲೇಖಿಸಲಾಗಿದೆ. ಹಾಗಾದ್ರೆ ಪೊಲೀಸರಿಗೆ ಕಾರಿನಲ್ಲಿ ನಾಲ್ವರು ಇದ್ದದ್ದಾಗಿ ಸುಳ್ಳು  ಮಾಹಿತಿ ಕೊಟ್ಟಿದ್ದೇಕೆ? ಕಾರಿನಲ್ಲಿ ಮತ್ತಿಬ್ಬರು ಇದ್ದದ್ದನ್ನು ದರ್ಶನ್ ಆಪ್ತರು ಮುಚ್ಚಿಟ್ಟಿದ್ದೇಕೆ? ಅವರಿಬ್ಬರು ಯಾರು? ಎಂಬ ಅನೇಕ  ಅನುಮಾನಗಳು ಈ ಪ್ರಕರಣದಲ್ಲಿ ಮೂಡಿಬಂದಿದೆ.  


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ