ಯಶ್-ರಾಧಿಕಾ ಅಭಿಮಾನಿಗಳಿಗೊಂದು ಸಿಹಿಸುದ್ದಿ ರಾಧಿಕಾ ಪಂಡಿತ್ ಗರ್ಭಿಣಿಯಂತೆ!

ಬುಧವಾರ, 25 ಜುಲೈ 2018 (10:58 IST)
ಬೆಂಗಳೂರು : ಸ್ಯಾಂಡಲ್ ವುಡ್ ನ ಕ್ಯೂಟ್ ಕಪಲ್ ರಾಕಿಂಗ್ ಸ್ಟಾರ್ ಯಶ್ -ರಾಧಿಕಾ ಪಂಡಿತ್ ಅವರು ಇದೀಗ ತಮ್ಮ ಅಭಿಮಾನಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಿದ್ದಾರೆ.


ಅದೇನೆಂದರೆ  ನಟಿ ರಾಧಿಕಾ ಪಂಡಿತ್ ಗರ್ಭಿಣಿಯಂತೆ. ಈ ವಿಚಾರವನ್ನು ನಟ ಯಶ್ ಅವರು ಫೇಸ್ ಬುಕ್ ನಲ್ಲಿ ವಿಡಿಯೋವೊಂದನ್ನು ಪೋಸ್ಟ್ ಮಾಡುವುದರ ಮೂಲಕ ತಮ್ಮ  ಅಭಿಮಾನಿಗಳ ಜೊತೆ ಹಂಚಿಕೊಂಡಿದ್ದಾರೆ. ಇದಕ್ಕೆ ಅಭಿಮಾನಿಗಳು ಶುಭಾಶೇಯದ ಸುರಿಮಳೆಯನ್ನೇ ಹರಿಸಿದ್ದಾರೆ.


ಇತ್ತೀಚೆಗಷ್ಟೇ 'ಕನ್ನಡದ ಕೋಟ್ಯಧಿಪತಿ' ಕಾರ್ಯಕ್ರಮದಲ್ಲಿ ಅತಿಥಿಯಾಗಿ ಆಗಮಿಸಿದ ನಟ ಯಶ್ ಅವರಿಗೆ ಅವರ ತಾಯಿ “ನಾನು ಅಜ್ಜಿ ಆಗೋದು ಯಾವಾಗ...? ''ಎಂದು ಕೇಳಿದ್ದರು. ಇದಕ್ಕೆ ನಟ ಯಶ್ ಅವರು ಸದ್ಯದಲ್ಲೇ ಸಿಹಿಸುದ್ದಿ ನೀಡುವುದಾಗಿ ಹೇಳಿದ್ದರು. ಇದೀಗ ಈ ದಂಪತಿಗಳು ನೀಡಿದ ಸಿಹಿಸುದ್ದಿಯಿಂದ  ಅವರ ಕುಟುಂಬದಲ್ಲಿ ಸಂತಸ ಮನೆ ಮಾಡಿದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ