ತುಳಸಿ ಪೂಜೆಯ ವೇಳೆ ಈ ನಿಯಮ ಪಾಲಿಸಿದರೆ ನಿಮಗೆ ಪೂಜೆಯ ಸಂಪೂರ್ಣ ಫಲ ದೊರಕುತ್ತದೆಯಂತೆ

ಸೋಮವಾರ, 11 ನವೆಂಬರ್ 2019 (06:28 IST)
ಬೆಂಗಳೂರು : ತುಳಸಿ ಹಬ್ಬದಂದು ಮಹಿಳೆಯರು ವಿಜೃಂಭಣೆಯಿಂದ ತುಳಸಿ ಪೂಜೆಯನ್ನು ಮಾಡುತ್ತಾರೆ. ತುಳಸಿ ಕಟ್ಟೆಗೆ ಅರಶಿನ ಕುಂಕುಮ ಹಚ್ಚಿ ನೆಲ್ಲಿಕಾಯಿ ದೀಪದಿಂದ ಆರತಿ ಎತ್ತುತ್ತಾರೆ. ಈ ಬಾರಿ ತುಳಸಿ ಹಬ್ಬಕ್ಕೆ ಈ ರೀತಿ ಪೂಜೆ ಮಾಡಿದರೆ ತುಳಸಿ ಪೂಜೆಯ ಸಂಪೂರ್ಣ ಫಲ ನಿಮಗೆ ಸಿಗುತ್ತದೆ.




ತುಳಸಿ ಕಟ್ಟೆಗೆ ನೀರು ಹಾಕುವಾಗ ತುಂಬಿದ ಚೊಂಬಿನಲ್ಲಿ ನೀರನ್ನು ಹಾಕಬೇಕು. ಮುಟ್ಟಾದ ಹೆಣ್ಣುಮಕ್ಕಳ ನೆರಳು ಕೂಡ ತುಳಸಿ ಗಿಡ, ಕಟ್ಟೆಯ ಮೇಲೆ ಬೀಳದಂತೆ ನೋಡಿಕೊಳ್ಳಿ. ತುಳಸಿ ಕಟ್ಟೆಗೆ ನೀರನ್ನು ಹಾಕಿದ ನಂತರ ಸ್ವಲ್ಪ ನೀರನ್ನು ನಿಮ್ಮ ತಲೆಯ ಮೇಲೆ ಪ್ರೋಕ್ಷಣೆ ಮಾಡಿಕೊಳ್ಳಬೇಕು.


ತುಳಸಿ ಕಟ್ಟೆಯ ಮಣ್ಣನ್ನು ಹಣೆಗೆ ಹಚ್ಚಿಕೊಳ್ಳಬೇಕು. ಹೀಗೆ ಹಚ್ಚಿಕೊಳ್ಳುವಾಗ ಈ ಶ್ಲೋಕವನ್ನು ಪಠಿಸಬೇಕು. “ಲಲಾಟೇ ಯಸ್ಯ ದೃಶ್ಯೇತ ತುಳಸೀಮೂಲಮೃತ್ತಿಕಾ| ಯಮಸ್ತಂ ನೇಕ್ಷಿತುಂ ಶಕ್ತಃ ಕಿಮು ದೂತಾ ಭಯಂಕರಾಃ. ಇದರಿಂದ ನಿಮಗಿರುವ ಅಪಮೃತ್ಯು ದೋಷ ನಿವಾರಣೆಯಾಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ