ವಿವಾಹಾದಿ ವಿಘ್ನಗಳಿದ್ದರೆ ಲಲಿತಾ ಅಷ್ಟೋತ್ತರ ಮಂತ್ರ ಓದಿ: ಕನ್ನಡದಲ್ಲಿ ಇಲ್ಲಿದೆ

Krishnaveni K

ಬುಧವಾರ, 8 ಜನವರಿ 2025 (08:44 IST)
ಬೆಂಗಳೂರು: ವಿವಾಹಾದಿ ವಿಚಾರಗಳಿಗೆ ವಿಘ್ನಗಳಾಗುತ್ತಿದ್ದರೆ ದೇವಿಯನ್ನು ಕುರಿತ ಲಲಿತಾ ಅಷ್ಟೋತ್ತರ ಮಂತ್ರವನ್ನು ಪ್ರತಿನಿತ್ಯ ತಪ್ಪದೇ ಓದಿ. ಕನ್ನಡದಲ್ಲಿ ಮಂತ್ರ ಇಲ್ಲಿದೆ.

ಲಲಿತಾ ಸಹಸ್ರನಾಮದಂತೇ ಲಲಿತಾ ಅಷ್ಟೋತ್ತರವೂ ದೇವಿಯನ್ನು ಪೂಜಿಸುವ ಮಂತ್ರವಾಗಿದೆ. ಜಾತಕದಲ್ಲಿ ದೋಷವಿದ್ದು ವಿವಾಹಕ್ಕೆ ಅಡ್ಡಿ ಬರುತ್ತಿದ್ದರೆ, ಜೀವನದಲ್ಲಿ ಸಂಪತ್ತು ವೃದ್ಧಿಯಾಗಬೇಕಾದರೆ, ಆರೋಗ್ಯ ಸಂಬಂಧೀ ಸಮಸ್ಯೆಯಿಂದ ಬಳಲುತ್ತಿದ್ದರೆ ಲಲಿತಾ ಅಷ್ಟೋತ್ತರವನ್ನು ಜಪಿಸುವುದು ತುಂಬಾ ಉತ್ತಮ. ಇದರಿಂದ ದೇವಿಯ ಅನುಗ್ರಹವು ಸಿಕ್ಕಿ ಜೀವನದಲ್ಲಿ ನೆಮ್ಮದಿ ಲಭಿಸುವುದು.

ಓಂ ರಜತಾಚಲ ಶೃಂಗಾಗ್ರ ಮಧ್ಯಸ್ಥಾಯೈ ನಮಃ
ಓಂ ಹಿಮಾಚಲ ಮಹಾವಂಶ ಪಾವನಾಯೈ ನಮಃ
ಓಂ ಶಂಕರಾರ್ಧಾಂಗ ಸೌಂದರ್ಯ ಶರೀರಾಯೈ ನಮಃ
ಓಂ ಲಸನ್ಮರಕತ ಸ್ವಚ್ಚ ವಿಗ್ರಹಾಯೈ ನಮಃ
ಓಂ ಮಹಾತಿಶಯ ಸೌಂದರ್ಯ ಲಾವಣ್ಯಾಯೈ ನಮಃ
ಓಂ ಶಶಾಂಕಶೇಖರ ಪ್ರಾಣವಲ್ಲಭಾಯೈ ನಮಃ
ಓಂ ಸದಾ ಪಂಚದಶಾತ್ಮೈಕ್ಯ ಸ್ವರೂಪಾಯೈ ನಮಃ
ಓಂ ವಜ್ರಮಾಣಿಕ್ಯ ಕಟಕ ಕಿರೀಟಾಯೈ ನಮಃ
ಓಂ ಕಸ್ತೂರೀ ತಿಲಕೋಲ್ಲಾಸಿತ ನಿಟಲಾಯೈ ನಮಃ
ಓಂ ಭಸ್ಮರೇಖಾಂಕಿತ ಲಸನ್ಮಸ್ತಕಾಯೈ ನಮಃ || 10 ||
ಓಂ ವಿಕಚಾಂಭೋರುಹದಳ ಲೋಚನಾಯೈ ನಮಃ
ಓಂ ಶರಚ್ಚಾಂಪೇಯ ಪುಷ್ಪಾಭ ನಾಸಿಕಾಯೈ ನಮಃ
ಓಂ ಲಸತ್ಕಾಂಚನ ತಾಟಂಕ ಯುಗಳಾಯೈ ನಮಃ
ಓಂ ಮಣಿದರ್ಪಣ ಸಂಕಾಶ ಕಪೋಲಾಯೈ ನಮಃ
ಓಂ ತಾಂಬೂಲಪೂರಿತಸ್ಮೇರ ವದನಾಯೈ ನಮಃ
ಓಂ ಸುಪಕ್ವದಾಡಿಮೀಬೀಜ ವದನಾಯೈ ನಮಃ
ಓಂ ಕಂಬುಪೂಗ ಸಮಚ್ಛಾಯ ಕಂಧರಾಯೈ ನಮಃ
ಓಂ ಸ್ಥೂಲಮುಕ್ತಾಫಲೋದಾರ ಸುಹಾರಾಯೈ ನಮಃ
ಓಂ ಗಿರೀಶಬದ್ದಮಾಂಗಳ್ಯ ಮಂಗಳಾಯೈ ನಮಃ
ಓಂ ಪದ್ಮಪಾಶಾಂಕುಶ ಲಸತ್ಕರಾಬ್ಜಾಯೈ ನಮಃ || 20 ||
ಓಂ ಪದ್ಮಕೈರವ ಮಂದಾರ ಸುಮಾಲಿನ್ಯೈ ನಮಃ
ಓಂ ಸುವರ್ಣ ಕುಂಭಯುಗ್ಮಾಭ ಸುಕುಚಾಯೈ ನಮಃ
ಓಂ ರಮಣೀಯಚತುರ್ಭಾಹು ಸಂಯುಕ್ತಾಯೈ ನಮಃ
ಓಂ ಕನಕಾಂಗದ ಕೇಯೂರ ಭೂಷಿತಾಯೈ ನಮಃ
ಓಂ ಬೃಹತ್ಸೌವರ್ಣ ಸೌಂದರ್ಯ ವಸನಾಯೈ ನಮಃ
ಓಂ ಬೃಹನ್ನಿತಂಬ ವಿಲಸಜ್ಜಘನಾಯೈ ನಮಃ
ಓಂ ಸೌಭಾಗ್ಯಜಾತ ಶೃಂಗಾರ ಮಧ್ಯಮಾಯೈ ನಮಃ
ಓಂ ದಿವ್ಯಭೂಷಣಸಂದೋಹ ರಂಜಿತಾಯೈ ನಮಃ
ಓಂ ಪಾರಿಜಾತಗುಣಾಧಿಕ್ಯ ಪದಾಬ್ಜಾಯೈ ನಮಃ
ಓಂ ಸುಪದ್ಮರಾಗಸಂಕಾಶ ಚರಣಾಯೈ ನಮಃ || 30 ||

ಓಂ ಕಾಮಕೋಟಿ ಮಹಾಪದ್ಮ ಪೀಠಸ್ಥಾಯೈ ನಮಃ
ಓಂ ಶ್ರೀಕಂಠನೇತ್ರ ಕುಮುದ ಚಂದ್ರಿಕಾಯೈ ನಮಃ
ಓಂ ಸಚಾಮರ ರಮಾವಾಣೀ ವಿರಾಜಿತಾಯೈ ನಮಃ
ಓಂ ಭಕ್ತ ರಕ್ಷಣ ದಾಕ್ಷಿಣ್ಯ ಕಟಾಕ್ಷಾಯೈ ನಮಃ
ಓಂ ಭೂತೇಶಾಲಿಂಗನೋಧ್ಬೂತ ಪುಲಕಾಂಗ್ಯೈ ನಮಃ
ಓಂ ಅನಂಗಭಂಗಜನ ಕಾಪಾಂಗ ವೀಕ್ಷಣಾಯೈ ನಮಃ
ಓಂ ಬ್ರಹ್ಮೋಪೇಂದ್ರ ಶಿರೋರತ್ನ ರಂಜಿತಾಯೈ ನಮಃ
ಓಂ ಶಚೀಮುಖ್ಯಾಮರವಧೂ ಸೇವಿತಾಯೈ ನಮಃ
ಓಂ ಲೀಲಾಕಲ್ಪಿತ ಬ್ರಹ್ಮಾಂಡಮಂಡಲಾಯೈ ನಮಃ
ಓಂ ಅಮೃತಾದಿ ಮಹಾಶಕ್ತಿ ಸಂವೃತಾಯೈ ನಮಃ || 40 ||
ಓಂ ಏಕಾಪತ್ರ ಸಾಮ್ರಾಜ್ಯದಾಯಿಕಾಯೈ ನಮಃ
ಓಂ ಸನಕಾದಿ ಸಮಾರಾಧ್ಯ ಪಾದುಕಾಯೈ ನಮಃ
ಓಂ ದೇವರ್ಷಭಿಸ್ತೂಯಮಾನ ವೈಭವಾಯೈ ನಮಃ
ಓಂ ಕಲಶೋದ್ಭವ ದುರ್ವಾಸ ಪೂಜಿತಾಯೈ ನಮಃ
ಓಂ ಮತ್ತೇಭವಕ್ತ್ರ ಷಡ್ವಕ್ತ್ರ ವತ್ಸಲಾಯೈ ನಮಃ
ಓಂ ಚಕ್ರರಾಜ ಮಹಾಯಂತ್ರ ಮಧ್ಯವರ್ಯೈ ನಮಃ
ಓಂ ಚಿದಗ್ನಿಕುಂಡಸಂಭೂತ ಸುದೇಹಾಯೈ ನಮಃ
ಓಂ ಶಶಾಂಕಖಂಡಸಂಯುಕ್ತ ಮಕುಟಾಯೈ ನಮಃ
ಓಂ ಮತ್ತಹಂಸವಧೂ ಮಂದಗಮನಾಯೈ ನಮಃ
ಓಂ ವಂದಾರುಜನಸಂದೋಹ ವಂದಿತಾಯೈ ನಮಃ || 50 ||

ಓಂ ಅಂತರ್ಮುಖ ಜನಾನಂದ ಫಲದಾಯೈ ನಮಃ
ಓಂ ಪತಿವ್ರತಾಂಗನಾಭೀಷ್ಟ ಫಲದಾಯೈ ನಮಃ
ಓಂ ಅವ್ಯಾಜಕರುಣಾಪೂರಪೂರಿತಾಯೈ ನಮಃ
ಓಂ ನಿತಾಂತ ಸಚ್ಚಿದಾನಂದ ಸಂಯುಕ್ತಾಯೈ ನಮಃ
ಓಂ ಸಹಸ್ರಸೂರ್ಯ ಸಂಯುಕ್ತ ಪ್ರಕಾಶಾಯೈ ನಮಃ
ಓಂ ರತ್ನಚಿಂತಾಮಣಿ ಗೃಹಮಧ್ಯಸ್ಥಾಯೈ ನಮಃ
ಓಂ ಹಾನಿವೃದ್ಧಿ ಗುಣಾಧಿಕ್ಯ ರಹಿತಾಯೈ ನಮಃ
ಓಂ ಮಹಾಪದ್ಮಾಟವೀಮಧ್ಯ ನಿವಾಸಾಯೈ ನಮಃ
ಓಂ ಜಾಗ್ರತ್ ಸ್ವಪ್ನ ಸುಷುಪ್ತೀನಾಂ ಸಾಕ್ಷಿಭೂತ್ಯೈ ನಮಃ
ಓಂ ಮಹಾಪಾಪೌಘಪಾಪಾನಾಂ ವಿನಾಶಿನ್ಯೈ ನಮಃ || 60 ||
ಓಂ ದುಷ್ಟಭೀತಿ ಮಹಾಭೀತಿ ಭಂಜನಾಯೈ ನಮಃ
ಓಂ ಸಮಸ್ತ ದೇವದನುಜ ಪ್ರೇರಕಾಯೈ ನಮಃ
ಓಂ ಸಮಸ್ತ ಹೃದಯಾಂಭೋಜ ನಿಲಯಾಯೈ ನಮಃ
ಓಂ ಅನಾಹತ ಮಹಾಪದ್ಮ ಮಂದಿರಾಯೈ ನಮಃ
ಓಂ ಸಹಸ್ರಾರ ಸರೋಜಾತ ವಾಸಿತಾಯೈ ನಮಃ
ಓಂ ಪುನರಾವೃತ್ತಿರಹಿತ ಪುರಸ್ಥಾಯೈ ನಮಃ
ಓಂ ವಾಣೀ ಗಾಯತ್ರೀ ಸಾವಿತ್ರೀ ಸನ್ನುತಾಯೈ ನಮಃ
ಓಂ ರಮಾಭೂಮಿಸುತಾರಾಧ್ಯ ಪದಾಬ್ಜಾಯೈ ನಮಃ
ಓಂ ಲೋಪಾಮುದ್ರಾರ್ಚಿತ ಶ್ರೀಮಚ್ಚರಣಾಯೈ ನಮಃ
ಓಂ ಸಹಸ್ರರತಿ ಸೌಂದರ್ಯ ಶರೀರಾಯೈ ನಮಃ || 70 ||
ಓಂ ಭಾವನಾಮಾತ್ರ ಸಂತುಷ್ಟ ಹೃದಯಾಯೈ ನಮಃ
ಓಂ ಸತ್ಯಸಂಪೂರ್ಣ ವಿಙ್ಞಾನ ಸಿದ್ಧಿದಾಯೈ ನಮಃ
ಓಂ ತ್ರಿಲೋಚನ ಕೃತೋಲ್ಲಾಸ ಫಲದಾಯೈ ನಮಃ
ಓಂ ಸುಧಾಬ್ಧಿ ಮಣಿದ್ವೀಪ ಮಧ್ಯಗಾಯೈ ನಮಃ
ಓಂ ದಕ್ಷಾಧ್ವರ ವಿನಿರ್ಭೇದ ಸಾಧನಾಯೈ ನಮಃ
ಓಂ ಶ್ರೀನಾಥ ಸೋದರೀಭೂತ ಶೋಭಿತಾಯೈ ನಮಃ
ಓಂ ಚಂದ್ರಶೇಖರ ಭಕ್ತಾರ್ತಿ ಭಂಜನಾಯೈ ನಮಃ
ಓಂ ಸರ್ವೋಪಾಧಿ ವಿನಿರ್ಮುಕ್ತ ಚೈತನ್ಯಾಯೈ ನಮಃ
ಓಂ ನಾಮಪಾರಾಯಣಾಭೀಷ್ಟ ಫಲದಾಯೈ ನಮಃ
ಓಂ ಸೃಷ್ಟಿ ಸ್ಥಿತಿ ತಿರೋಧಾನ ಸಂಕಲ್ಪಾಯೈ ನಮಃ || 80 ||
ಓಂ ಶ್ರೀಷೋಡಶಾಕ್ಷರಿ ಮಂತ್ರ ಮಧ್ಯಗಾಯೈ ನಮಃ
ಓಂ ಅನಾದ್ಯಂತ ಸ್ವಯಂಭೂತ ದಿವ್ಯಮೂರ್ತ್ಯೈ ನಮಃ
ಓಂ ಭಕ್ತಹಂಸ ಪರೀಮುಖ್ಯ ವಿಯೋಗಾಯೈ ನಮಃ
ಓಂ ಮಾತೃ ಮಂಡಲ ಸಂಯುಕ್ತ ಲಲಿತಾಯೈ ನಮಃ
ಓಂ ಭಂಡದೈತ್ಯ ಮಹಸತ್ತ್ವ ನಾಶನಾಯೈ ನಮಃ
ಓಂ ಕ್ರೂರಭಂಡ ಶಿರಛ್ಚೇದ ನಿಪುಣಾಯೈ ನಮಃ
ಓಂ ಧಾತ್ರ್ಯಚ್ಯುತ ಸುರಾಧೀಶ ಸುಖದಾಯೈ ನಮಃ
ಓಂ ಚಂಡಮುಂಡನಿಶುಂಭಾದಿ ಖಂಡನಾಯೈ ನಮಃ
ಓಂ ರಕ್ತಾಕ್ಷ ರಕ್ತಜಿಹ್ವಾದಿ ಶಿಕ್ಷಣಾಯೈ ನಮಃ
ಓಂ ಮಹಿಷಾಸುರದೋರ್ವೀರ್ಯ ನಿಗ್ರಹಯೈ ನಮಃ || 90 ||
ಓಂ ಅಭ್ರಕೇಶ ಮಹೊತ್ಸಾಹ ಕಾರಣಾಯೈ ನಮಃ
ಓಂ ಮಹೇಶಯುಕ್ತ ನಟನ ತತ್ಪರಾಯೈ ನಮಃ
ಓಂ ನಿಜಭರ್ತೃ ಮುಖಾಂಭೋಜ ಚಿಂತನಾಯೈ ನಮಃ
ಓಂ ವೃಷಭಧ್ವಜ ವಿಙ್ಞಾನ ಭಾವನಾಯೈ ನಮಃ
ಓಂ ಜನ್ಮಮೃತ್ಯುಜರಾರೋಗ ಭಂಜನಾಯೈ ನಮಃ
ಓಂ ವಿದೇಹಮುಕ್ತಿ ವಿಙ್ಞಾನ ಸಿದ್ಧಿದಾಯೈ ನಮಃ
ಓಂ ಕಾಮಕ್ರೋಧಾದಿ ಷಡ್ವರ್ಗ ನಾಶನಾಯೈ ನಮಃ
ಓಂ ರಾಜರಾಜಾರ್ಚಿತ ಪದಸರೋಜಾಯೈ ನಮಃ
ಓಂ ಸರ್ವವೇದಾಂತ ಸಂಸಿದ್ದ ಸುತತ್ತ್ವಾಯೈ ನಮಃ
ಓಂ ಶ್ರೀ ವೀರಭಕ್ತ ವಿಙ್ಞಾನ ನಿಧಾನಾಯೈ ನಮಃ || 100 ||
ಓಂ ಆಶೇಷ ದುಷ್ಟದನುಜ ಸೂದನಾಯೈ ನಮಃ
ಓಂ ಸಾಕ್ಷಾಚ್ಚ್ರೀದಕ್ಷಿಣಾಮೂರ್ತಿ ಮನೋಙ್ಞಾಯೈ ನಮಃ
ಓಂ ಹಯಮೇಥಾಗ್ರ ಸಂಪೂಜ್ಯ ಮಹಿಮಾಯೈ ನಮಃ
ಓಂ ದಕ್ಷಪ್ರಜಾಪತಿಸುತ ವೇಷಾಢ್ಯಾಯೈ ನಮಃ
ಓಂ ಸುಮಬಾಣೇಕ್ಷು ಕೋದಂಡ ಮಂಡಿತಾಯೈ ನಮಃ
ಓಂ ನಿತ್ಯಯೌವನ ಮಾಂಗಲ್ಯ ಮಂಗಳಾಯೈ ನಮಃ
ಓಂ ಮಹಾದೇವ ಸಮಾಯುಕ್ತ ಶರೀರಾಯೈ ನಮಃ
ಓಂ ಮಹಾದೇವ ರತ್ಯೌತ್ಸುಕ್ಯ ಮಹದೇವ್ಯೈ ನಮಃ
ಓಂ ಚತುರ್ವಿಂಶತಂತ್ರ್ಯೈಕ ರೂಪಾಯೈ ||108 ||
ಶ್ರೀ ಲಲಿತಾಷ್ಟೋತ್ತರ ಶತನಾಮಾವಳಿ ಸಂಪೂರ್ಣಮ್

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ