ಬೆಂಗಳೂರು: ಗಣೇಶ ಎಂದರೆ ಮಕ್ಕಳಿಂದ ಹಿಡಿದು ವಯೋವೃದ್ಧರವರೆಗೂ ಅದೇನೋ ಪ್ರೀತಿ, ನಮ್ಮ ಮನೆಯವನೇ ಎಂಬ ಭಾವದಿಂದ ಪೂಜೆ ಮಾಡುತ್ತಾರೆ. ಗಣೇಶನಿಗೆ ದೇವಾದಿದೇವತೆಗಳಲ್ಲಿ ಅಷ್ಟೊಂದು ಆದ್ಯತೆ ಇರುವುದಕ್ಕೆ ಕಾರಣವೂ ಇದೆ. ಅವನ ದೇಹದ ಪ್ರತಿಯೊಂದು ಅಂಗಾಂಗಕ್ಕೂ ವಿಶೇಷ ಅರ್ಥವಿದೆ.
ಗಣೇಶನ ಬಾಯಿ: ದೊಡ್ಡ ಕಿವಿಗಳಿರುವ ಗಣೇಶನಿಗೆ ಬಾಯಿಗಳು ಮಾತ್ರ ಪುಟ್ಟದಾಗಿವೆ. ಅದರ ಅರ್ಥ ಹೆಚ್ಚು ಕೇಳಿ, ಆದರೆ ಕಡಿಮೆ ಮಾತನಾಡಿ ಎಂದಾಗಿದೆ.
ಗಣೇಶನ ಉದರ: ಗಣೇಶನನ್ನು ದೊಡ್ಡ ಹೊಟ್ಟೆಯವನು ಎಂದು ತಮಾಷೆ ಮಾಡುತ್ತಾರೆ. ಆದರೆ ಇದರ ಅರ್ಥ ಹಾಗಲ್ಲ. ಜೀವನದಲ್ಲಿ ಒಳ್ಳೆಯದನ್ನು ಮತ್ತು ಕೆಟ್ಟದ್ದನ್ನು ಸಮನಾಗಿ ಸ್ವೀಕರಿಸಿ ಜೀರ್ಣಿಸಿಕೊಳ್ಳಬೇಕು ಎಂದಾಗಿದೆ.
ಗಣೇಶನ ನಾಲ್ಕು ಕೈಗಳು: ಮೊದಲನೆಯ ಕೈ ಬಂಧ, ಆಸೆ, ನೋವುಗಳನ್ನು ಬೇರ್ಪಡಿಸುವ ಸಂಕೇತವಾಗಿದೆ. ಎರಡನೆಯ ಕೈ ಮಾನವ ವಿಕಾಸದ ಸಂಕೇತವಾಗಿದೆ. ಮೂರನೆಯ ಕೈ ಆಧ್ಯಾತ್ಮಿಕತೆಯ ಸಂಕೇತವಾಗಿದೆ. ನಾಲ್ಕನೆಯ ಕೈ ಭಕ್ತಿ, ಮಾಧುರ್ಯದ ಸಂಕೇತವಾಗಿದೆ.
ಗಣೇಶನ ಕಾಲುಗಳು: ಗಣೇಶನ ಕಾಲುಗಳೂ ಆಧ್ಯಾತ್ಮಿಕತೆ, ಅರಿವಿನ ಸಂಕೇತವಾಗಿದೆ.
ಗಣೇಶನ ಏಕದಂತ: ಗಣೇಶ ಎಂದರೆ ಏಕದಂತ ಎಂದೇ ಹೆಸರು ವಾಸಿ. ಇದು ಕೆಟ್ಟದನ್ನು ಹೊಸಕಿ ಹಾಕಿ ಒಳ್ಳೆಯದನ್ನು ಸ್ವೀಕರಿಸುವುದರ ಸಂಕೇತವಾಗಿದೆ.