ಸರ್ಪಗಳ ಜಾತಿಗೆ ಸೇರಿದ ಹಲ್ಲಿ ಕೆಲವೊಮ್ಮೆ ನಮಗೆ ಒಳಿತು ಮಾಡುತ್ತದೆ, ಇನ್ನು ಕೆಲವೊಮ್ಮೆ ಕೆಡುಕಾಗುತ್ತದೆ ಎಂಬ ನಂಬಿಕೆ ನಮ್ಮಲ್ಲಿದೆ. ಹಲ್ಲಿ ನೆತ್ತಿಯ ಮೇಲೆ ಬಿದ್ದರೆ ಮರಣ, ಮುಖದ ಮೇಲೆ ಬಿದ್ದರೆ ಅತಿಥಿಗಳು ಬರುತ್ತಾರೆ ಎಂಬಿತ್ಯಾದಿ ನಂಬಿಕೆಗಳು ಹಿಂದೂ ಧರ್ಮದಲ್ಲಿದೆ.
ಮಂಗಳವಾರದಂದು ಪೂರ್ವ ದಿಕ್ಕಿನಲ್ಲಿ ಕೂತು ಹಲ್ಲಿ ಲೊಚಗುಟ್ಟಿದರೆ ಸಮೃದ್ಧಿಯಾಗುತ್ತದೆ. ಆಗ್ನೇಯ ದಿಕ್ಕಿನಲ್ಲಿ ಕೂತು ಲೊಚಗುಟ್ಟುವುದರಿಂದ ಅತಿಥಿಗಳ ಭೇಟಿಯಾಗುತ್ತದೆ. ಪಶ್ಚಿಮದಲ್ಲಿ ಕೂತು ಲೊಚಗುಟ್ಟಿದರೆ ಮಾಡುವ ಕೆಲಸಗಳಲ್ಲಿ ಯಶಸ್ಸು ಸಿಗುವುದು. ಈಶಾನ್ಯ ಭಾಗದಲ್ಲಿ ಕೂತು ಕೂಗಿದರೆ ವಾಹನ ಖರೀದಿ ಯೋಗವಿದೆ. ನೆಲದಲ್ಲಿ ಲೊಚಗುಟ್ಟಿದರೆ ನಿಮ್ಮ ಸಂಪತ್ತು ವೃದ್ಧಿಯಾಗುತ್ತದೆ ಎಂಬ ನಂಬಿಕೆಯಿದೆ.