Mouni Amavasya: ಮೌನಿ ಅಮವಾಸ್ಯೆಗೆ ಯಾವ ದೇವರ ಪೂಜೆ ಮಾಡಬೇಕು

Krishnaveni K

ಬುಧವಾರ, 29 ಜನವರಿ 2025 (08:44 IST)
Photo Credit: X
ಬೆಂಗಳೂರು: ಇಂದು ಮೌನಿ ಅಮವಾಸ್ಯೆ ಎಂದು ಆಚರಿಸಲಾಗುತ್ತಿದ್ದು, ಇಂದು ಯಾವ ದೇವರನ್ನು ಹೇಗೆ ಪೂಜೆ ಮಾಡಬೇಕು ಇಲ್ಲಿದೆ ಮಾಹಿತಿ.

ಮೌನಿ ಅಮವಾಸ್ಯೆ ಎನ್ನುವುದು ಹಿಂದೂ ಸಂಪ್ರದಾಯದಲ್ಲಿ ವಿಶೇಷ ಸ್ಥಾನ ಪಡೆದಿದೆ. ಇಂದು ವಿಶೇಷವಾಗಿ ಮಹಾವಿಷ್ಣುವಿನ ಪೂಜೆ ಮಾಡಲಾಗುತ್ತದೆ. ಮೌನಿ ಅಮವಾಸ್ಯೆ ವ್ರತ ಮಾಡುವುದರಿಂದ ನಮಗೆ ಪಿತೃ ದೋಷಗಳು ಪರಿಹಾರವಾಗಿ ಜೀವನದಲ್ಲಿ ಅಭಿವೃದ್ಧಿ ಪಡೆಯಬಹುದಾಗಿದೆ.

ಮೌನಿ ಅಮಾಸ್ಯೆಯ ದಿನದಂದು ಉಪವಾಸ ವ್ರತ ಕೈಗೊಂಡು ಪವಿತ್ರ ನದಿಯಲ್ಲಿ ಸ್ನಾನ ಮಾಡುವುದರಿಂದ ಪಾಪ ಕಳೆದು ಹೋಗುತ್ತದೆ ಎಂಬ ನಂಬಿಕೆಯಿದೆ. ವಿಶೇಷವಾಗಿ ಇಂದು ತ್ರಿವೇಣಿ ಸಂಗಮ ಅಥವಾ ಗಂಗಾ ನದಿಯ ಸ್ನಾನ ಮಾಡುವುದು ಅತ್ಯಂತ ವಿಶೇಷವಾಗಿದೆ.

ಮೌನಿ ಅಮವಾಸ್ಯೆ ದಿನ ಪವಿತ್ರ ಸ್ನಾನ ಮಾಡಿದರೆ ದೇಹದ ಆರೋಗ್ಯಕ್ಕೂ ಉತ್ತಮ. ಶನಿ ದೋಷವಿರುವವರು ಈ ದಿನ ನದಿ ಸ್ನಾನ ಮಾಡಿದರೆ ದೋಷ ಪರಿಹಾರವಾಗುವುದು. ವಿಶೇಷವಾಗಿ ಈಗ ಶನಿ ದೆಸೆ ನಡೆಯುತ್ತಿರುವ ಮಕರ, ಕುಂಭ,ಮೀನ ರಾಶಿಯವರು ಇಂದು ಪವಿತ್ರ ಸ್ನಾನ ಮಾಡುವುದು ಅತ್ಯಂತ ಶ್ರೇಯಸ್ಕರವಾಗಿದೆ.  ಇಂದು ಗಂಗಾ ಸ್ನಾನ ಮಾಡಿ ಮಹಾವಿಷ್ಣುವಿಗೆ ಪೂಜೆ ಮಾಡುವುದರಿಂದ ಸಕಲವೂ ಒಳಿತಾಗುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ