Shiva Pradosha Mantra: ಶಿವನ ಪ್ರದೋಷ ದಿನದಂದು ಇಂದು ಈ ಮಂತ್ರವನ್ನು ಜಪಿಸಿ

Krishnaveni K

ಸೋಮವಾರ, 27 ಜನವರಿ 2025 (08:41 IST)
ಬೆಂಗಳೂರು: ಇಂದು ಶಿವನ ಪ್ರದೋಷ ದಿನವಾಗಿದ್ದು, ಈ ದಿನ ವಿಶೇಷವಾಗಿ ಶಿವನನ್ನು ಪ್ರದೋಷ ಮಂತ್ರದ ಜಪದೊಂದಿಗೆ ಪೂಜೆ ಮಾಡುವುದರಿಂದ ನಿಮಗೆ ಒಳಿತಾಗುವುದು.

ಹಿಂದೂ ಕ್ಯಾಲೆಂಡರ್ ಪ್ರಕಾರ ಪ್ರತೀ ತಿಂಗಳ ತ್ರಯೋದಶಿ ತಿಥಿಯಂದು ಪ್ರದೋಷವೆಂದು ಪರಿಗಣಿಸಲಾಗುತ್ತದೆ. ಇಂದು ಆ ಶುಭ ದಿನವಾಗಿದ್ದು ಶಿವನ ಆರಾಧನೆಗೆ ವಿಶೇಷವಾದ ದಿನವಾಗಿದೆ. ಇಂದು ಶಿವನಿಗೆ ಪ್ರದೋಷ ಮಂತ್ರ ಹೇಳಿ ಪೂಜೆ ಮಾಡುವುದರಿಂದ ಜೀವನದಲ್ಲಿ ಹಲವು ಸಮಸ್ಯೆಗಳು ಪರಿಹಾರವಾಗುತ್ತದೆ.

ಪ್ರದೋಷ ದಿನದಂದು ಈ ಮಂತ್ರಗಳನ್ನು ತಪ್ಪದೇ ಜಪಿಸಿ:
ಓಂ ನಮಃ ಶಿವಾಯ
ಓಂ ತ್ರಿನೇತ್ರಾಯ ನಮಃ
ಓಂ ಏಂ ನಮಃ ಶಿವಾಯ
ಓಂ ಏಂ ಹ್ರೀಂ ಶಿವ ಗೌರೀಮಯ ಹ್ರೀಂ ಏಂ ಊಂ
ಓಂ ಶಿವಾಯ ನಮಃ
ಓಂ ಶ್ರಾಂ ಶ್ರೀಂ ಶ್ರೌಂ ಸಃ ಸೋಮಾಯ ನಮಃ
ಓಂ ಆಷುತೋಷಾಯ ನಮಃ
ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ, ತನ್ನೋ ರುದ್ರ ಪ್ರಚೋದಯಾತ್
ಓಂ ಮೃತ್ಯುಂಜಯ ಮಹಾದೇವ ತ್ರಾಹಿಮಾಂ ಶರಣಾಗತಮ ಜನ್ಮ ಮೃತ್ಯು ಜರಾ ವ್ಯಾಧಿ ಪೀಡಿತಂ ಕರ್ಮ ಬಂಧನಃ
ಈ ಮಂತ್ರಗಳನ್ನು ಪಠಿಸುವುದರ ಜೊತೆಗೆ ಯಾವುದಾದರೂ ಶಿವ ದೇವಾಲಯಕ್ಕೆ ತೆರಳಿ ರುದ್ರಾಭಿಷೇಕ, ಎಳೆನೀರಿನ ಅಭಿಷೇಕ ಮಾಡಿಸುವುದರಿಂದ ನಿಮಗೆ ಜೀವನದಲ್ಲಿ ಸಕಲ ಸಮಸ್ಯೆಗಳಿಂದ ಮುಕ್ತಿ ಸಿಗುತ್ತದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ