ನವರಾತ್ರಿಯ 2ನೇ ದಿನ ದೇವಿಗೆ ಈ ಹೂ ಹಾಗೂ ನೈವೇದ್ಯ ಅರ್ಪಿಸಿ
ಭಾನುವಾರ, 18 ಅಕ್ಟೋಬರ್ 2020 (07:49 IST)
ಬೆಂಗಳೂರು : ಇಂದು ನವರಾತ್ರಿಯ 2ನೇ ದಿನ. ಈ ದಿನ ಬ್ರಹ್ಮಚಾರಿಣಿ ದೇವಿಯನ್ನು ಪೂಜಿಸುತ್ತೇವೆ. ಇಂದು ದೇವಿಗೆ ಯಾವ ಹೂಗಳಿಂದ ಹಾಗೂ ಯಾವ ನೈವೇದ್ಯದಿಂದ ಪೂಜಿಸಿದರೆ ಉತ್ತಮ ಎಂಬುದನ್ನು ತಿಳಿದುಕೊಳ್ಳಿ.
ಇಂದು ದೇವಿಗೆ ಮಲ್ಲಿಗೆ ಹೂಗಳಿಂದ ಅಲಂಕಾರವನ್ನು ಮಾಡಿ. ಇದರಿಂದ ಜೀವನದ ದಾರಿದ್ರ್ಯ ದೋಷ ಕಳೆಯುತ್ತದೆ. ದೇವಿಗೆ ಒಂದು ಬಟ್ಟಲು ಸಕ್ಕರೆಯನ್ನು ಹಾಗೂ ಪುಳಿಯೋಗರೆಯನ್ನು ನೈವೇದ್ಯವಾಗಿ ಇಟ್ಟರೆ ಬ್ರಹ್ಮಚಾರಣಿ ದೇವಿಯ ಅನುಗ್ರಹವಾಗುತ್ತದೆ. ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ.
ಇಂದು ದೇವಿಯನ್ನು ಪೂಜಿಸುವಾಗ “ಓಂ ಹ್ರೀಂ ಶ್ರೀಂ ಬ್ರಹ್ಮಚಾರಿಣಿ ದುರ್ಗಾಯೈ ನಮಃ” ಮಂತ್ರವನ್ನು 3, 11, 21, 108 ಬಾರಿ ಪಠಿಸಿ.