ಲಕ್ಷ್ಮೀ ನೆಲೆಸಬೇಕೆಂದರೆ ಮನೆ ಮುಂದೆ ಈ ಗಿಡಗಳನ್ನು ನೆಡಿ

Krishnaveni K

ಸೋಮವಾರ, 29 ಜುಲೈ 2024 (14:04 IST)
ಬೆಂಗಳೂರು: ಲಕ್ಷ್ಮೀ ದೇವಿ ಸದಾ ನಮ್ಮ ಮನೆಯಲ್ಲಿರಬೇಕೆಂದರೆ ಕೆಲವೊಂದು ವಾಸ್ತು ಸಲಹೆಗಳನ್ನು ಪಾಲಿಸಿದರೆ ಉತ್ತಮ. ಮನೆ ಮುಂದೆ ಈ ಕೆಲವು ಗಿಡಗಳನ್ನು ಬೆಳೆಸುವುದರಿಂದ ಲಕ್ಷ್ಮೀ ದೇವಿಯ ಕೃಪೆ ಸಿಗುತ್ತದೆ. ಅವು ಯಾವುವು ನೋಡೋಣ.

ತುಳಸಿ ಗಿಡ: ಪ್ರತಿಯೊಬ್ಬರ ಮನೆ ಮುಂದೆ ತುಳಸಿ ಗಿಡ ಇದ್ದೇ ಇರುತ್ತದೆ. ತುಳಸಿ ಗಿಡವನ್ನು ದೇವಿಯೆಂದು ನಾವು ಪೂಜಿಸುತ್ತೇವೆ. ಮನೆಯ ದ್ವಾರಕ್ಕೆ ನೇರವಾಗಿ ಕಾಣುವಂತೆ ತುಳಸಿ ಕಟ್ಟೆ ಮಾಡಿ ಅಲ್ಲಿ ಗಿಡ ನೆಟ್ಟರೆ ಲಕ್ಷ್ಮೀ ದೇವಿಯ ಕೃಪೆ ಸಿಗುತ್ತದೆ. ಜೊತೆಗೆ ಅದಕ್ಕೆ ನೀರು ಹಾಕಿ ಬಾಡದಂತೆ ಸದಾ ಕಾಪಾಡಬೇಕು.

ಬಿಲ್ವ ಪತ್ರೆ: ಶಿವನಿಗೆ ಪ್ರಿಯವಾದ ಬಿಲ್ವ ಪತ್ರೆಯ ಗಿಡ ಅಥವಾ ಮರವನ್ನು ಮನೆಯ ಮುಂಭಾಗ ಬೆಳೆಸುವುದರಿಂದ ನಿಮಗೆ ಲಕ್ಷ್ಮೀ ದೇವಿಯ ಕೃಪಾಕಟಾಕ್ಷ ದೊರೆಯುತ್ತದೆ. ಲಕ್ಷ್ಮೀ ದೇವಿಯ 16 ಸ್ಥಾನಗಳಲ್ಲಿ ಬಿಲ್ವ ವೃಕ್ಷವೂ ಒಂದಾಗಿರುವುದರಿಂದ ಮನೆಯ ಮುಂಭಾಗ ಬಿಲ್ವ ವೃಕ್ಷವನ್ನು ಪೋಷಿಸಿ.

ಮನಿ ಪ್ಲಾಂಟ್: ಮನಿ ಪ್ಲಾಂಟ್ ಅತ್ಯಂತ ಶುಭದಾಯಕ ಗಿಡವಾಗಿದೆ. ಮನೆಯ ಮುಂಭಾಗ ಅಥವಾ ಬಾಲ್ಕನಿಯಲ್ಲಿ ಒಂದು ಪಾಟ್ ನಲ್ಲೂ ಇದನ್ನು ಬೆಳೆಸಬಹುದು. ಮನಿಪ್ಲಾಂಟ್ ಬಳ್ಳಿ ಮೇಲಕ್ಕೆ ಹಬ್ಬುವಂತೆ ನೆಟ್ಟರೆ ಧನ ವೃದ್ಧಿಯಾಗುತ್ತದೆ. ಆದರೆ ನೆನಪಿರಲಿ, ಯಾವತ್ತೂ ಇದು ನೆಲದಲ್ಲಿ ಹರಡದಂತೆ ಎಚ್ಚರಿಕೆ ವಹಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ