ಬೆಂಗಳೂರು: ಶಿವನನ್ನು ಕುರಿತು ಮಂತ್ರಗಳನ್ನು ಹೇಳುವುದರಿಂದ ಚಿತ್ತ ಚಾಂಚಲ್ಯ ನಿವಾರಣೆಯಾಗಿ ಏಕಾಗ್ರತೆ ಮೂಡುತ್ತದೆ. ಮಕ್ಕಳಿಗಾಗಿ ಕನ್ನಡದಲ್ಲಿ ಶಿವನ ಕುರಿತಾದ ಎರಡು ಮಂತ್ರಗಳು ಇಲ್ಲಿದೆ ತಪ್ಪದೇ ಪ್ರತಿನಿತ್ಯ ಹೇಳಿಸಿ.
ಶಿವನ ಕುರಿತಾಗಿ ಮಂತ್ರಗಳನ್ನು ಹೇಳುವುದರಿಂದ ಮಕ್ಕಳಿಗೆ ಧೈರ್ಯ, ಆತ್ಮಸ್ಥೈರ್ಯವೂ ಹೆಚ್ಚುತ್ತದೆ. ಓದಿನಲ್ಲಿ ಏಕಾಗ್ರೆತೆ ಹೆಚ್ಚುತ್ತದೆ. ಜೊತೆಗೆ ಮಕ್ಕಳಿಗೆ ರೋಗ ಭಯವಿದ್ದರೆ ನಾಶವಾಗುತ್ತದೆ. ಆಯುಷ್ಯ ವೃದ್ಧಿಗಾಗಿ ಶಿವನ ಕುರಿತಾದ ಮಂತ್ರಗಳನ್ನು ಮಕ್ಕಳಿಗೆ ಹೇಳಿದಿ. ಮೊದಲನೆಯದಾಗಿ ಶಿವ ಧ್ಯಾನ ಮಂತ್ರ ಇಲ್ಲಿದೆ ನೋಡಿ.
ಕರಚರಣಕೃತಂ ವಾಕ್ ಕಾಯಜಂ ಕರ್ಮಜಂ ವಾ ಶ್ರವಣನಯನಜಂ ವಾ ಮಾನಸಂವಾಪರಾಧಂ ವಿಹಿತಂ ವಿಹಿತಂ ವಾ ಸರ್ವಮೇತತ್ ಕ್ಷಮಸ್ವ ಜಯ ಜಯ ಕರುಣಾಬ್ದೇ ಶ್ರೀ ಮಹಾದೇವ ಶಂಭೋ
ಈ ಮಂತ್ರವನ್ನು ಹೇಳುವುದರಿಂದ ಮಾನಸಿಕ ಒತ್ತಡ, ಖಿನ್ನತೆ, ಆತಂಕಗಳು ದೂರವಾಗಿ ಮನಸ್ಸಿಗೆ ನೆಮ್ಮದಿಯಾಗುವುದು. ಇದೇ ರೀತಿ ಶಿವ ಗಾಯತ್ರಿ ಮಂತ್ರವನ್ನು ಹೇಳಿಸಿ. ಓಂ ತತ್ಪುರುಷಾಯ ವಿದ್ಮಹೇ ಮಹಾದೇವಾಯ ಧೀಮಹಿ ತನ್ನೋ ರುದ್ರಃ ಪ್ರಚೋದಯಾತ್
ಈ ಮಂತ್ರದಲ್ಲಿ ಶಿವನನ್ನು ಕುರಿತು ನಮಗೆ ಸದ್ಬುದ್ಧಿಯನ್ನು ಕೊಡು ಎಂದು ಪ್ರಾರ್ಥನೆ ಮಾಡಲಾಗುತ್ತದೆ.