ಶನಿ ದೋಷದಿಂದ ಸಂಕಷ್ಟ ಅನುಭವಿಸುತ್ತಿರುವವರು ಶನಿವಾರಗಳಂದು ತಪ್ಪದೇ ಹನುಮಂತನ ಸೇವೆ, ಮಂತ್ರಗಳನ್ನು ಪಠಿಸುವುದು ಅತ್ಯಂತ ಶ್ರೇಯಸ್ಕರವಾಗಿದೆ. ಶನಿ ದೋಷ ನಿವಾರಣೆಗೆ ಆಂಜನೇಯನ ಪೂಜೆ ಮಾಡುವುದು ಅಗತ್ಯ. ಶನಿ ದೋಷ ಹೊಂದಿರುವವರು ಆಂಜನೇಯ ದ್ವಾದಶ ಸ್ತೋತ್ರವನ್ನು ತಪ್ಪದೇ ಓದಬೇಕು.
ಆಂಜನೇಯನು ಶನಿ ದೋಷ ನಿವಾರಕ ಮಾತ್ರವಲ್ಲ, ನಮಗೆ ಜೀವನದಲ್ಲಿ ಶತ್ರುಭಯ, ಹಣಕಾಸಿನ ಸಮಸ್ಯೆ, ಮಾನಸಿಕ ನೆಮ್ಮದಿಗೆ ಕೊರತೆಯಿದ್ದಲ್ಲಿ ಆಂಜನೇಯನನ್ನು ಕುರಿತು ಮಂತ್ರಗಳು ಹೇಳುವುದು ಹೊಸ ಚೈತನ್ಯ ತರುತ್ತದೆ. ವಿಶೇಷವಾಗಿ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ಅಡ್ಡಿ ಆತಂಕ ಅನುಭವಿಸುತ್ತಿದ್ದರೆ, ಉದ್ಯೋಗದಲ್ಲಿ ಅಡೆತಡೆಗಳು ಕಂಡುಬರುತ್ತಿದ್ದರೆ ಆಂಜನೇಯನನ್ನು ಕುರಿತು ಪ್ರಾರ್ಥನೆ ಮಾಡುವುದು ಉತ್ತಮ.
ಹನುಮಾನಂಜನಾಸೂನುಃ ವಾಯುಪುತ್ರೋ ಮಹಾಬಲಃ |
ರಾಮೇಷ್ಟಃ ಫಲ್ಗುಣಸಖಃ ಪಿಂಗಾಕ್ಷೋಽಮಿತವಿಕ್ರಮಃ || ೧ ||
ಉದಧಿಕ್ರಮಣಶ್ಚೈವ ಸೀತಾಶೋಕವಿನಾಶಕಃ |
ಲಕ್ಷ್ಮಣ ಪ್ರಾಣದಾತಾಚ ದಶಗ್ರೀವಸ್ಯ ದರ್ಪಹಾ || ೨ ||
ದ್ವಾದಶೈತಾನಿ ನಾಮಾನಿ ಕಪೀಂದ್ರಸ್ಯ ಮಹಾತ್ಮನಃ |
ಸ್ವಾಪಕಾಲೇ ಪಠೇನ್ನಿತ್ಯಂ ಯಾತ್ರಾಕಾಲೇ ವಿಶೇಷತಃ |
ತಸ್ಯಮೃತ್ಯು ಭಯಂ ನಾಸ್ತಿ ಸರ್ವತ್ರ ವಿಜಯೀ ಭವೇತ್ || ೩ ||
ಇತಿ ಶ್ರೀ ಹನುಮಾನ್ ದ್ವಾದಶನಾಮ ಸ್ತೋತ್ರಂ |