ಮೈಕೈ ನೋವಿಗೆ ಮಾತ್ರೆಯ ಬದಲು ಈ ಟಿಪ್ಸ್ ಫಾಲೋ ಮಾಡಿ ನೋಡಿ

ಗುರುವಾರ, 2 ಆಗಸ್ಟ್ 2018 (07:04 IST)
ಬೆಂಗಳೂರು : ಕೆಲವೊಂದು ಎಣ್ಣೆಗಳು ನೋವು ಪರಿಣಾಮಕಾರಿಯಾದ ನಿವಾರಕ ಎಣ್ಣೆಗಳಂದೇ ಪ್ರಸಿದ್ಧಿಯನ್ನು ಪಡೆದಿದೆ. ಮೈಕೈ ನೋವು ಕಾಣಿಸಿಕೊಂಡ ತಕ್ಷಣ ನೋವು ನಿವಾರಕ ಮಾತ್ರೆ ನುಂಗುವ ಬದಲು ನೋವು ನಿವಾರಕ ಎಣ್ಣೆಯಿಂದ ಮಸಾಜ್ ಮಾಡುವುದು ಉತ್ತಮವಾದ ವಿಧಾನ. ಏಕೆಂದರೆ ನೋವು ನಿವಾರಕ ಮಾತ್ರೆಗಳು ಆರೋಗ್ಯದ ಮೇಲೆ ಕೆಟ್ಟ ಪ್ರಭಾವವನ್ನು ಬೀರಬಹುದು, ಎಣ್ಣೆ ಮಸಾಜ್ ಮಾಡಿದರೆ ಭಯವಿಲ್ಲ.


ಈ ಎಣ್ಣೆಯನ್ನು ನೋವು ಇರುವ ಕಡೆ ಹಾಕಿ ತಿಕ್ಕಿದರೆ ನಿಮ್ಮ ನೋವು ಸ್ವಲ್ಪ ಹೊತ್ತಿನಲ್ಲಿಯೇ ಕಮ್ಮಿಯಾಗುವುದು. ಆ ಪರಿಣಾಮಕಾರಿಯಾದ ನೋವು ನಿವಾರಕ ಎಣ್ಣೆಗಳು ಯಾವುವು ಎಂಬುದು  ಇಲ್ಲಿದೆ ನೋಡಿ:

*ಪುದೀನಾ ತೈಲ
ಶೀತವಾದಾಗ ಮೈ ಕೈ ನೋವು ಕಾಣಿಸಿಕೊಳ್ಳುವುದು ಸಹಜ. ಈ ನೋವನ್ನು ಹೋಗಲಾಡಿಸಲು ಪುದೀನಾ ತೈಲ ಬಳಸುವುದು ಒಳ್ಳೆಯದು.

*ಲ್ಯಾವಂಡರ್ ಎಣ್ಣೆ
ತುಂಬಾ ಮಾನಸಿಕ ಒತ್ತಡ ಉಂಟಾದಾಗ ತಲೆ ಸಿಡಿಯಲಾರಂಭಿಸುತ್ತದೆ, ಮೈಯಲ್ಲಿ ನೋವು ಕಂಡು ಬರುವುದು. ಈ ರೀತಿ ಕಾಣಿಸಿಕೊಂಡರೆ ಸ್ವಲ್ಪ ಲ್ಯಾವಂಡರ್ ತೈಲದಿಂದ ತಲೆಗೆ ಮಸಾಜ್ ಮಾಡಿ, ಮಾನಸಿಕ ಒತ್ತಡ ಕಡಿಮೆಯಾಗಿ ಸ್ವಲ್ಪ ರಿಲ್ಯಾಕ್ಸ್ ಆಗುವಿರಿ.

*ಸಾಸಿವೆ ಎಣ್ಣೆ
ಸಾಸಿವೆ ಎಣ್ಣೆಯನ್ನು ಬೆಳ್ಳುಳ್ಳಿ ಹಾಕಿ ಬಿಸಿ ಮಾಡಿ ಅದರಿಂದ ಎದೆ ಭಾಗಕ್ಕೆ ಮಸಾಜ್ ಮಾಡಿದರೆ ಕಫದಿಂದ ಮುಕ್ತಿ ದೊರೆಯುತ್ತದೆ.

*ಚಂದನ ತೈಲ
ಗಂಟುಗಳಲ್ಲಿ ಉರಿ, ತುಂಬಾ ಮೈ ಕೈ ನೋವು ಕಾಣಿಸಿಕೊಂಡರೆ ಚಂದನ ತೈಲದಿಂದ ಮಸಾಜ್ ಮಾಡಿದರೆ ಮೈಯನ್ನು ತಂಪು ಮಾಡಿ, ಮೈಕೈ ನೋವನ್ನು ಕಡಿಮೆಮಾಡುತ್ತದೆ.

*ನೀಲಗಿರಿ ಎಣ್ಣೆ
ಸಂಧಿನೋವು ಕಾಣಿಸಿಕೊಂಡರೆ ಅದನ್ನು ಕಡಿಮೆ ಮಾಡುವಲ್ಲಿ ನೀಲಗಿರಿ ಎಣ್ಣೆ ಸಹಾಯ ಮಾಡುತ್ತದೆ.

*ರೋಸ್ಮೆರಿ ತೈಲ
ಇದು ಎರಡು ಪ್ರಮುಖ ಪ್ರಯೋಜವನ್ನು ಹೊಂದಿದೆ. ಇದನ್ನು ಹಚ್ಚಿದಾಗ ನೋವು ಕಮ್ಮಿಯಾಗುವುದರ ಜೊತೆಗೆ ರಕ್ತಸಂಚಾರ ಸರಿಯಾಗಿ ನಡೆಯುವಲ್ಲಿ ಸಹಕಾರಿಯಾಗಿದೆ.

*ಶುಂಠಿ ತೈಲ
ಮೈಕೈ ನೋವನ್ನು ಕಮ್ಮಿ ಮಾಡುವಲ್ಲಿ ಶುಂಠಿ ತೈಲ ತುಂಬಾ ಪರಿಣಾಮಕಾರಿ. ಸ್ನಾಯು ಸೆಳೆತ ಹೋಗಲಾಡಿಸುವಲ್ಲಿ ಇದು ಬೆಸ್ಟ್. ಸ್ನಾಯು ಸೆಳೆತ ಕಾಣಿಸಿಕೊಂಡಾಗ ಸ್ವಲ್ಪ ಶುಂಠಿಯನ್ನು ಜಗಿದು ತಿಂದರೂ ನೋವು ಕಮ್ಮಿಯಾಗುವುದು.

*ಕ್ಯಮೊಮೈಲ್ ತೈಲ ಈ ಸುಗಂಧಭರಿತ ಎಣ್ಣೆ ಒತ್ತಡವನ್ನು ಹೋಗಲಾಡಿಸಿ, ನೋವನ್ನು ನೀವಾರಿಸುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ