ಪರೀಕ್ಷೆ ಸಮಯದಲ್ಲಿ ವಿದ್ಯಾರ್ಥಿಗಳು ತಪ್ಪದೇ ಈ ಮಂತ್ರ ಓದಿ

Krishnaveni K

ಭಾನುವಾರ, 9 ಫೆಬ್ರವರಿ 2025 (08:21 IST)
ಬೆಂಗಳೂರು: ಇನ್ನೇನು ವಿದ್ಯಾರ್ಥಿಗಳಿಗೆ ಪರೀಕ್ಷೆಗಳು ಹತ್ತಿರಬರುತ್ತಿದ್ದು ಈ ಸಂದರ್ಭದಲ್ಲಿ ಓದಿನಲ್ಲಿ ಯಶಸ್ಸು ಸಿಗಬೇಕಾದರೆ ಸರಸ್ವತಿ ದೇವಿಯ ಈ ಮಂತ್ರವನ್ನು ತಪ್ಪದೇ ಓದಿ.

ಸರಸ್ವತಿ ದೇವಿಯು ವಿದ್ಯೆಗೆ ಅಧಿಪತಿಯಾಗಿದ್ದಾಳೆ. ಪರೀಕ್ಷೆ ಹತ್ತಿರ ಬಂದಾಗ ಮನಸ್ಸು ಶಾಂತವಾಗಿ ಓದಿನತ್ತ ಏಕಾಗ್ರತೆ ಸಾಧಿಸಲು ದೇವರ ಅನುಗ್ರಹವೂ ಮುಖ್ಯವಾಗುತ್ತದೆ. ಹೀಗಾಗಿ ಈ ಸಂದರ್ಭದಲ್ಲಿ ಸರಸ್ವತಿಯ ದೇವಿಯನ್ನು ಪ್ರಾರ್ಥಿಸಿ ಓದಲು ಕೂತರೆ ಉತ್ತಮ.

ವಿಶೇಷವಾಗಿ ಬೆಳಗ್ಗಿನ ಸಮಯ ಓದಲು ಕೂರುವ ಮುನ್ನ ಸರಸ್ವತಿ ದೇವಿಗೆ ದೀಪ ಹಚ್ಚಿ ಈ ಮಂತ್ರವನ್ನು ತಪ್ಪದೇ ಪಠಿಸಿ.

ಓಂ ಸರಸತ್ಯೈ ವಿದ್ಮಹೇ ಬ್ರಹ್ಮಪುತ್ರಾಯೈ ಧೀಮಹಿ
ತನ್ನೋ ದೇವಿ ಪ್ರಚೋದಯಾತ್
ಈ ಮಂತ್ರವನ್ನು ಹೇಳುವುದರಿಂದ ಅಜ್ಞಾನ ದೂರವಾಗಿ ಓದಿನ ಕಡೆಗೆ ಏಕಾಗ್ರತೆಯು ಹೆಚ್ಚುತ್ತದೆ. ಜೊತೆಗೆ ಸರಸ್ವತಿ ದೇವಿಯ ಆಶೀರ್ವಾದವೂ ನಿಮಗೆ ಸಿಗುತ್ತದೆ. ತಪ್ಪದೇ ಮಕ್ಕಳ ಕೈಯಲ್ಲಿ ಹೇಳಿಸಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ