ಸೆಕ್ಸ್ ನಿಂದ ದೇಹದ ಮೇಲೆ ಯಾವ ರೀತಿ ಉಪಯೋಗವಾಗುತ್ತೆ ಗೊತ್ತಾ?
ಶನಿವಾರ, 9 ಜೂನ್ 2018 (08:57 IST)
ಬೆಂಗಳೂರು: ಲೈಂಗಿಕ ಕ್ರಿಯೆ ಎನ್ನುವುದು ನಮ್ಮ ಮನದ, ದೇಹದ ಸಂತೋಷಕ್ಕೆ ಮಾತ್ರವಲ್ಲ. ಇದರಿಂದ ನಮ್ಮ ದೇಹಕ್ಕೆ ಹಲವು ಆರೋಗ್ಯಕರ ಉಪಯೋಗವಿದೆ. ಅವು ಯಾವುವು ನೋಡೋಣ.
ಸೆಕ್ಸ್ ಮಾಡುವಾಗ ನಮ್ಮ ಹೃದಯಕ್ಕೆ ಹೆಚ್ಚಿನ ವ್ಯಾಯಾಮ ಸಿಗುತ್ತದೆ ಎಂದು ಹಲವು ಅಧ್ಯಯನಗಳೇ ದೃಢಪಡಿಸಿವೆ. ಅಷ್ಟೇ ಅಲ್ಲದೆ, ಇದರಿಂದ ರಕ್ತದೊತ್ತಡವೂ ಸಹಜ ಸ್ಥಿತಿಗೆ ಬರುತ್ತದಂತೆ.
ದೇಹಕ್ಕೆ ಚಟುವಟಿಕೆ ಒದಗಿಸುವ ಕ್ರಿಯೆಯಾದ್ದರಿಂದ ಕ್ಯಾಲೊರಿ ಇಳಿಸಲು, ಮಾಂಸಖಂಡಗಳು ಸಶಕ್ತವಾಗಲು ಸೆಕ್ಸ್ ಸಹಕಾರಿ. ರಕ್ತದೊತ್ತಡದ ಜತೆಗೆ, ಮನಸ್ಸಿನ ಒತ್ತಡ, ಹೃದಯ, ಪಕ್ಷಪಾತ ಸಮಸ್ಯೆಯನ್ನೂ ಇದು ದೂರ ಮಾಡುತ್ತದೆ. ಹೆಚ್ಚು ಸೆಕ್ಸ್ ಮಾಡಿದಷ್ಟೂ ಆರೋಗ್ಯವೂ ಚೆನ್ನಾಗಿ ಆಗುತ್ತದೆಂದು ತಜ್ಞರೇ ಹೇಳುತ್ತಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿಕೊಳ್ಳಿ.