ಈ ರಾಶಿಯಲ್ಲಿ ಹುಟ್ಟಿದ ಹುಡುಗಿಯರಿಗೆ ಹೆಚ್ಚು ಕೋಪವಿರುತ್ತದೆಯಂತೆ

ಶನಿವಾರ, 5 ಅಕ್ಟೋಬರ್ 2019 (08:06 IST)
ಬೆಂಗಳೂರು : ಸಾಮಾನ್ಯವಾಗಿ ಎಲ್ಲರಿಗೂ ಕೋಪ ಬರುತ್ತದೆ. ಆದರೆ ಈ ರಾಶಿಯಲ್ಲಿ ಹುಟ್ಟಿದ ಹುಡುಗಿಯರಿಗೆ ಹೆಚ್ಚು ಕೋಪವಿರುತ್ತದೆಯಂತೆ. ಅದು ಯಾವ ರಾಶಿ ಎಂಬುದು ಇಲ್ಲಿದೆ ನೋಡಿ.
*ಮೇಷರಾಶಿ: ಈ ರಾಶಿಯ ಅಧಿಪತಿ ಕುಜನಾಗಿರುವುದರಿಂದ ಅವರಿಗೆ ಕೋಪ ಹೆಚ್ಚು, ಆದರೆ ಅದು ಸ್ವಲ್ಪ ಹೊತ್ತು ಮಾತ್ರ ಇರುತ್ತದೆ.


*ವೃಶ್ಚಿಕ ರಾಶಿ : ವೃಶ್ಚಿಕ ರಾಶಿಯ ಸ್ತ್ರೀಯರು ಪುರುಷರಂತಹ ಸ್ವಭಾವವನ್ನು ಹೊಂದಿರುತ್ತಾರೆ. ಸೌಮ್ಯ ಮನಸ್ಸು ಇರುವುದು ತುಂಬಾ ಕಡಿಮೆ. ಎಲ್ಲವನ್ನೂ ತುಂಬಾ ಆಳವಾಗಿ ಪರಿಗಣಿಸುತ್ತಾರೆ. ಗಾಢವಾದ ಸ್ನೇಹಿತರಾದರು, ಶತ್ರುಗಳಾದರು ತುಂಬಾ ವರ್ಷ ಕಳೆದರೂ ಸಹ ಮೋಸ ಮಾಡಿದವರ ವಿರುದ್ಧ ಹಗೆ ಸಾಧಿಸುವವರೆಗೂ ಬಿಡುವುದಿಲ್ಲ.


* ಮಕರ: ಈ ರಾಶಿಯ ಹುಡುಗಿಯರಿಗೂ ಕೂಡ ಧೈರ್ಯ ತುಂಬಾ ಹೆಚ್ಚು, ಬಣ್ಣ ಬಣ್ಣದ ಮಾತುಗಳನ್ನು ಆಡುವವರ ಮೇಲೆ ಇವರಿಗೆ ನಂಬಿಕೆ ಬರುವುದಿಲ್ಲ. ಒಂದುವೇಳೆ ಸುಳ್ಳು ಹೇಳಲು ಪ್ರಯತ್ನಿಸಿದರೆ ಸಿಕ್ಕಿಬೀಳುತ್ತಾರೆ. ಇವರ ವಿರುದ್ಧವಾಗಿ  ಮಾತನಾಡಿದರೆ ಸಹಿಸಿಕೊಳ್ಳುವುದಿಲ್ಲ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ