ಬಹುಪಯೋಗಿ ಲಿಂಬೆ ಹಣ್ಣು: ಚರ್ಮದ ಕಾಂತಿಗೆ-ತೂಕ ನಿಯಂತ್ರಣ

ಬುಧವಾರ, 6 ಡಿಸೆಂಬರ್ 2017 (17:22 IST)
ಲಿಂಬೆ ಹಣ್ಣು ಕಡಿಮೆ ದರದಲ್ಲಿ ಸುಲಭವಾಗಿ ಕೈಗೆಟಕುವ ಸಿಟ್ರಸ್ ಹಣ್ಣಾಗಿದೆ. ಲಿಂಬೆ ಕೇಕ್, ಲಿಂಬೆ ಚಿಕನ್ ಮತ್ತು ಲಿಂಬೆಯಿಂದ ಮಾಡುವ ತಂಪುಪಾನೀಯಗಳಿಂದ ಅಡುಗೆ ಮನೆಯ ಅವಶ್ಯಕತೆಗಳಿಗೆ ಹೆಸರುವಾಸಿಯಾಗಿದೆ. ಪಾಕದ ಅಂದವನ್ನು ಹೆಚ್ಚಿಸುವಲ್ಲೂ ಲಿಂಬೆ ತನ್ನ ಪ್ರಸಿದ್ಧಿಯನ್ನು ಮೆರೆದಿದೆ. 
ಲಿಂಬೆ ರಸವು 5 ಶೇಕಡದಷ್ಟು ಸಿಟ್ರಿಕ್ ಹುಳಿಯನ್ನು ತನ್ನಲ್ಲಿ ಒಳಗೊಂಡಿದ್ದು ಇದು ಲಿಂಬೆಗೆ ಅದ್ಭುತ ರುಚಿಯನ್ನು ನೀಡಿದೆ. ಅದೂ ಅಲ್ಲದೆ ಲಿಂಬೆ ತನ್ನಲ್ಲಿ ವಿಟಮಿನ್ 'ಸಿ' ಅಂಶವನ್ನು ಹೇರಳವಾಗಿ ಪಡೆದುಕೊಂಡಿದೆ. ಲಿಂಬೆ ರಸವನ್ನು ಜ್ಯೂಸ್ ಮಾಡಿ ಮುಂಜಾನೆ ಕುಡಿಯುವುದರಿಂದ ಮನಸ್ಸಿಗೆ ಉಲ್ಲಾಸವನ್ನು ಇದು ನೀಡುತ್ತದೆ. 
 
ಲಿಂಬೆ ರಸದ ಇನ್ನಷ್ಟು ಪ್ರಯೋಜನಗಳ ಬಗೆಗೆ ವಿವರವಾಗಿ ತಿಳಿದುಕೊಳ್ಳೋಣ:
 
ಹೊಟ್ಟೆಗೆ ಉತ್ತಮ:
 
ಲಿಂಬೆ ರಸವನ್ನು ಬಿಸಿ ನೀರಿನಲ್ಲಿ ಬೆರೆಸಿ ಕುಡಿಯುವುದರಿಂದ ಹೊಟ್ಟೆಯ ಹಲವಾರು ವಿಧದ ಕಾಯಿಲೆಗಳು ತಟ್ಟನೆ ಮಾಯವಾಗುತ್ತದೆ. ಇದು ವಾಕರಿಕೆ, ಎದೆಯುರಿಗೆ ಉತ್ತಮ ಔಷಧವಾಗಿದೆ. ಲಿಂಬೆಯ ಜೀರ್ಣಕ್ರಿಯೆ ಗುಣಗಳಿಂದಾಗಿ, ಅಜೀರ್ಣದ ಲಕ್ಷಣಗಳಾದಂತಹ ಎದೆಯುರಿ, ಹೊಟ್ಟೆ ಉಬ್ಬರ ಮತ್ತು ತೇಗು ಮಾಯವಾಗುತ್ತದೆ. ಲಿಂಬೆ ರಸವನ್ನು ನಿಯಮಿತವಾಗಿ ತೆಗೆದುಕೊಳ್ಳುವುದರಿಂದ, ಕರುಳು ಬೇಡವಾದ ಉತ್ಪನ್ನಗಳನ್ನು ಸುಲಭವಾಗಿ ಹೊರಹಾಕುತ್ತದೆ. 
 
ಚರ್ಮದ ಕಾಂತಿಗೆ:
 
ಚರ್ಮದ ಹಲವಾರು ಬಗೆಯ ಸಮಸ್ಯೆಗಳನ್ನು ನಿವಾರಿಸುವಲ್ಲಿ ಲಿಂಬೆ ಬಹುಪ್ರಯೋಜನಕಾರಿ. ಇದು ನಿಮ್ಮ ತ್ವಚೆಯ ಸೌಂದರ್ಯವನ್ನು ಹೆಚ್ಚಿಸುವಲ್ಲಿ ತನ್ನ ಉತ್ತಮ ಪ್ರಭಾವವನ್ನು ಬೀರುತ್ತದೆ. ಲಿಂಬೆ ರಸದಿಂದ ಮುಖವನ್ನು ಪ್ರತಿನಿತ್ಯ ತೊಳೆಯುವುದರಿಂದ ಮುಖದ ಕಾಂತಿ ವೃದ್ಧಿಸುತ್ತದೆ. 
 
ಹಲ್ಲಿನ ರಕ್ಷಣೆಗೆ: 
 
ಹಲ್ಲಿನ ರಕ್ಷಣೆಯಲ್ಲೂ ಲಿಂಬೆಯ ರಸ ಪರಿಣಾಮಕಾರಿಯಾದುದು. ಹಲ್ಲುನೋವಿನ ಭಾಗದಲ್ಲಿ ಇದರ ರಸವನ್ನು ಲೇಪಿಸುವುದರಿಂದ, ಹಲ್ಲುನೋವಿನ ಬಾಧೆಯಿಂದ ಕೂಡಲೇ ನೀವು ಉಪಶಮನವನ್ನು ಪಡೆಯುವಿರಿ. ದವಡೆಯಿಂದ ರಕ್ತಒಸರುವ ಸಮಸ್ಯೆಗೂ ಇದು ಉತ್ತಮವಾದುದು. 
 
ಗಂಟಲು ಸೋಂಕುಗಳಿಗೆ:
 
ಗಂಟಲಿನ ಹಲವಾರು ತೊಂದರೆಗಳಿಗೆ ಲಿಂಬೆ ರಸವು ರಾಮಬಾಣ ಒಡೆದ ಗಂಟಲು ಹಾಗೂ ಬ್ಯಾಕ್ಟೀರಿಯಾ ಅಂಶಗಳನ್ನು ಹೊಂದಿರುವ ಟಾನ್ಸಿಲ್(ಗಲಗ್ರಂಥಿಯ ಉರಿಯೂತ) ಗೂ ಇದು ಉತ್ತಮ ಔಷಧವಾಗಿದೆ.
 
ತೂಕ ನಿಯಂತ್ರಣಕ್ಕೆ: 
 
ಲಿಂಬೆ ರಸವನ್ನು ನಿಯಮಿತವಾಗಿ ಕುಡಿಯುವುದರಿಂದ ದೇಹದಲ್ಲಿರುವ ಅನಗತ್ಯ ಬೊಜ್ಜನ್ನು ಕರಗಲು ನೆರವನ್ನು ನೀಡುತ್ತದೆ.
 
ಹೆಚ್ಚಿನ ರಕ್ತದೊತ್ತಡದ ನಿಯಂತ್ರಣಕ್ಕೆ:
 
ಹೃದಯ ತೊಂದರೆಗಳನ್ನು ಹೊಂದಿರುವವರಿಗೆ ಲಿಂಬೆ ರಸವು ಅತ್ಯುತ್ತಮ ಔಷಧವಾಗಿದೆ. ಇದರಲ್ಲಿರುವ ಹೆಚ್ಚಿನ ಪೊಟ್ಯಾಶಿಯಂ ಅಂಶವು ಈ ತೊಂದರೆಯನ್ನು ನೀಗಿಸುವಲ್ಲಿ ಆಶ್ವಾಸಕಾರಿಯಾದುದು. ಅಸ್ತಮದ ತೊಂದರೆ ನಿವಾರಿಸುವಲ್ಲಿ ಲಿಂಬೆ ರಸ ಹೆಚ್ಚಿನ ಪಾತ್ರವನ್ನು ವಹಿಸುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ