ಲಕ್ಷ್ಮೀ ಅನುಗ್ರಹಕ್ಕಾಗಿ ಯಾವಾಗಲೂ ನಿಮ್ಮ ಮನೆಯಲ್ಲಿ ಇರಲಿ ಈ 5 ವಸ್ತುಗಳು

ಶನಿವಾರ, 21 ಸೆಪ್ಟಂಬರ್ 2019 (05:55 IST)
ಬೆಂಗಳೂರು : ಮನೆಯಲ್ಲಿ ಸಂಪತ್ತಿನ ಅಧಿದೇವತೆ ಲಕ್ಷ್ಮೀದೇವಿ ನೆಲೆಸಿರಬೇಕು ಎಂದು ಎಲ್ಲರೂ ಪೂಜೆ ಪುನಸ್ಕಾರಗಳನ್ನು ಮಾಡುತ್ತಾರೆ. ಆದರೆ ನೀವು ಎಷ್ಟೇ ಪೂಜೆ ಮಾಡದರೂ ಮನೆಯಲ್ಲಿ ಈ 5 ವಸ್ತುಗಳು ಖಾಲಿಯಾದರೆ ಅಂತವರ ಮನೆಯಿಂದ ಲಕ್ಷ್ಮೀ ಹೊರಟು ಹೋಗುತ್ತಾಳಂತೆ.




*ಮನೆಯಲ್ಲಿ ಹಾಲು ಖಾಲಿಯಾಗದಂತೆ ನೋಡಿಕೊಳ್ಳಿ. ಒಂದು ಚಿಕ್ಕ ಕಪ್ಪಿನಲ್ಲಿ ಹಾಲನ್ನು ಎತ್ತಿಕೊಂಡು ಉಳಿದದ್ದನ್ನು ಮಾತ್ರವೇ ಬಳಸಿಕೊಳ್ಳಬೇಕು. ಹಾಲು ಮಜ್ಜಿಗೆ ಮೊಸರು ಯಾವಾಗಲೂ ಮನೆಯಲ್ಲಿ ಇರಬೇಕು. ಆಗ ಮಹಾಲಕ್ಷ್ಮಿಯು ಮನೆಯಲ್ಲಿ ನೆಲೆಸುತ್ತಾಳೆ.


*ಮನೆಯಲ್ಲಿ ನೀರಿನ ಕೊಡಪಾನ ಖಾಲಿ ಇರಬಾರದು. ಸದಾ ಮನೆಯಲ್ಲಿ ನೀರನ್ನು ತುಂಬಿಸಿಟ್ಟುಕೊಂಡಿರಬೇಕು. ಅಲ್ಲದೇ ನೀರನ್ನು ಮಿತವಾಗಿ ಬಳಸಬೇಕು. ಹೀಗೆ ಮಾಡಿದರೆ ಲಕ್ಷ್ಮೀ ಪ್ರಸನ್ನಳಾಗುತ್ತಾಳಂತೆ.


*ಮನೆಯಲ್ಲಿ ಅಕ್ಕಿ ಖಾಲಿಯಾಗದಂತೆ ನೋಡಿಕೊಳ್ಳಿ. ಯಾಕೆಂದರೆ ಭತ್ತ, ಅಕ್ಕಿ ಸಮೃದ್ಧಿಯ ಸಂಕೇತ. ಇದು ಖಾಲಿಯಾದರೆ ಲಕ್ಷ್ಮೀ ಮನೆಯಿಂದ ಹೊರಟುಹೋಗುತ್ತಾಳಂತೆ.


* ದೇವರ ಕೋಣೆಯಲ್ಲಿ, ನಿಮ್ಮ ಪರ್ಸ್ನಲ್ಲಿ ಅಥವಾ ಲಾಕರ್ ನಲ್ಲಿ ಹಣದ ನಾಣ್ಯಗಳನ್ನು ಇಡುವುದರಿಂದ ಹಣದ ಸಮಸ್ಯೆ ಇರುವುದಿಲ್ಲ.

* ಉಪ್ಪು ಮನೆಯಲ್ಲಿ ಖಾಲಿ ಆಗಬಾರದು. ಒಂದು ವೇಳೆ ಖಾಲಿಯಾದರೆ ಮನೆಗೆ ನಕರಾತ್ಮಕ ಶಕ್ತಿಗಳು ಪ್ರವೇಶಿಸುತ್ತದೆಯಂತೆ. ಅಂತಹ ಸ್ಥಳದಲ್ಲಿ ಲಕ್ಷ್ಮೀ ನೆಲೆಸಿರುವುದಿಲ್ಲವಂತೆ. ಮನೆಯಲ್ಲಿ ಉಪ್ಪು ಖಾಲಿ ಆಗದಂತೆ ಮುಂಜಾಗ್ರತೆ ವಹಿಸಬೇಕು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ