ಮುಂದೆ ಆಗುವ ಘಟನೆಗಳ ಮುನ್ಸೂಚನೆ ನೀಡುತ್ತೆ ನಮ್ಮ ದೇಹದ ಈ ಅಂಗಾಗಗಳು

ಸೋಮವಾರ, 4 ಮಾರ್ಚ್ 2019 (10:25 IST)
ಬೆಂಗಳೂರು : ಮುಂದೆ ಆಗುವ ಘಟನೆಗಳ ಬಗ್ಗೆ ಪ್ರಕೃತಿ ನಮಗೆ ಮೊದಲೆ ಸೂಚನೆ ನೀಡುತ್ತದೆ ಎಂದು ಹೇಳುತ್ತಾರೆ. ಅದೇರೀತಿ ನಮ್ಮ ದೇಹದ ಅಂಗಾಂಗಗಳು ಕೂಡ ಮುಂದೆ ಆಗುವ ಘಟನೆಗಳ ಬಗ್ಗೆ ಮುನ್ಸೂಚನೆ ನೀಡುತ್ತದೆ. ಅದು ಯಾವ ರೀತಿ ಎಂಬ ಮಾಹಿತಿ ಇಲ್ಲಿದೆ ನೋಡಿ.

ವ್ಯಕ್ತಿಯ ಹಣೆ ಮೇಲೆ ತುಡಿತ ಕಾಣಿಸಿಕೊಂಡ್ರೆ ಭೌತಿಕ ಸುಖ ಪ್ರಾಪ್ತಿಯಾಗುತ್ತದೆ ಎಂದರ್ಥ. ಹಣ ಪ್ರಾಪ್ತಿಯ ಸಂಕೇತವನ್ನು ಇದು ನೀಡುತ್ತದೆ. ಮನುಷ್ಯನ ಎರಡೂ ಕೆನ್ನೆಗಳು ಒಂದೇ ಬಾರಿ ಹಾರಿದ ಅನುಭವವಾದ್ರೆ ಧನ ಪ್ರಾಪ್ತಿಯ ಸಾಧ್ಯತೆ ಹೆಚ್ಚಿರುತ್ತದೆ.

 

ಬಲಗಣ್ಣು ಕುಣಿಯಲು ಶುರುವಾದ್ರೆ ಕೆಲವೇ ದಿನಗಳಲ್ಲಿ ಬೇಡಿಕೆ ಈಡೇರಲಿದೆ ಎಂದರ್ಥ. ಎಡಗಣ್ಣು ಕುಣಿಯಲು ಶುರುವಾದ್ರೆ ಶೀರ್ಘವೇ ಉತ್ತಮ ಸುದ್ದಿ ಬರಲಿದೆ ಎಂಬ ನಂಬಿಕೆಯಿದೆ. ಬಲತೊಡೆ ಕುಣಿದ ಅನುಭವವಾದ್ರೆ ಕಿರಿಕಿರಿ, ಅವಮಾನ ಎದುರಿಸಬೇಕಾಗುತ್ತದೆ. ಎಡ ತೊಡೆ ಬಡಿದುಕೊಂಡ್ರೆ ಆರ್ಥಿಕ ವೃದ್ಧಿಯಾಗುತ್ತದೆ ಎಂಬುದರ ಸಂಕೇತ ನೀಡುತ್ತದೆ.

 

ವ್ಯಕ್ತಿಯ ತುಟಿಗಳು ಕುಣಿಯುತ್ತಿರುವ ಅನುಭವವಾದ್ರೆ ಜೀವನದಲ್ಲಿ ಹೊಸ ಸ್ನೇಹಿತನ ಆಗಮನವಾಗಲಿದೆ. ಆತನಿಂದ ಹೆಚ್ಚು ಪ್ರೀತಿ ಸಿಗಲಿದೆ ಎಂಬುದರ ಸಂಕೇತವಾಗಿದೆ. ಸೊಂಟದ ಭಾಗ ಕುಣಿದ ಅನುಭವವಾದ್ರೆ ಮುಂದಿನ ದಿನಗಳಲ್ಲಿ ದೊಡ್ಡ ಸಮಸ್ಯೆ ಎದುರಾಗಲಿದೆ ಎಂದರ್ಥ.

 

ತಾಜಾ ಸುದ್ದಿಗಳನ್ನು ಓದಲು ವೆಬ್ದುನಿಯಾ ಮೊಬೈಲ್ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ