ರಾತ್ರಿ ವೇಳೆ ಉಗುರು ಕತ್ತರಿಸಬಾರದೆಂದು ಹಿರಿಯರು ಹೇಳುವುದು ಇದೇ ಕಾರಣಕ್ಕಂತೆ!

ಶನಿವಾರ, 31 ಮಾರ್ಚ್ 2018 (04:55 IST)
ಬೆಂಗಳೂರು : ನಾವು ಉಗುರುಗಳನ್ನು ಮನೆಯಲ್ಲೇ ಕತ್ತರಿಸಿಕೊಳ್ಳುತ್ತೇವೆ. ಉಗುರುಗಳು ಚಿಕ್ಕದಾಗಿರುವಾಗಲೇ ಕೆಲವರು ಕತ್ತಿಸಿಕೊಂಡರೆ,ಇನ್ನು ಕೆಲವರು ಉದ್ದವಾಗುವವರೆಗೂ ಕಾದು ನಂತರ ಕತ್ತರಿಸುತ್ತಾರೆ. ಹೀಗೆ ಉಗುರುಗಳನ್ನು ಹೇಗೇ ಬೇಕಾದರೂ ಕತ್ತರಿಸಿ, ಆದರೆ ಹಗಲು ವೇಳೆ ಮಾತ್ರ ಕತ್ತರಿಸಬೇಕಂತೆ ರಾತ್ರಿ ವೇಳೆ ಕತ್ತರಿಸಲೇ ಬಾರದೆಂದು ಹಿರಿಯರು ಹೇಳುತ್ತಾರೆ. ಇದಕ್ಕೆ ಕಾರಣ ಇಲ್ಲಿದೆ.


ಉಗುರುಗಳನ್ನು ರಾತ್ರಿವೇಳೆ ಕತ್ತರಿಸಬಾರದೆಂಬುದಕ್ಕೆ ಮುಖ್ಯವಾಗಿ ಎರಡು ಕಾರಣಗಳಿವೆ. ಹಿಂದಿನ ಕಾಲದಲ್ಲಿ ಉಗುರುಗಳನ್ನು ಕತ್ತರಿಸಲು ಬ್ಲೇಡ್ ಇಲ್ಲವೆ ಕತ್ತರಿಗಳನ್ನು ಉಪಯೋಗಿಸುತ್ತಿದ್ದರು. ರಾತ್ರಿವೇಳೆ ಕತ್ತಲಿರುವುದರಿಂದ ,ಉಗುರುಗಳನ್ನು ಕತ್ತರಿಸಿದರೆ ಗಾಯಗಳಾಗುವ ಸಾಧ್ಯತೆಯಿರುತ್ತದೆ. ಹಾಗಾಗಿ ರಾತ್ರಿವೇಳೆ ಉಗುರುಗಳನ್ನು ಕತ್ತರಿಸಬಾರದೆಂದು ಅಂದಿನ ದಿನಗಳಲ್ಲಿ ಹೇಳುತ್ತಿದ್ದರು.


ಮತ್ತೊಂದು ಕಾರಣವೆಂದರೆ ರಾತ್ರಿ ವೇಳೆ ಕ್ಷುದ್ರ ಶಕ್ತಿಗಳನ್ನು ಆರಾಧಿಸುವವರು, ಮಾಯ, ಮಾಟ ಮಾಡುವವರು ತಿರುಗಾಡುತ್ತಿರುತ್ತಾರೆ. ಒಂದು ವೇಳೆ ನಾವು ಕತ್ತರಿಸಿದ ಉಗುರುಗಳು ಅವರಿಗೆ ದೊರೆತರೆ, ಮಾಟ ಮಾಡಿ ನಮಗೆ ಕೆಟ್ಟದಾಗುವಂತೆ ಮಾಡುವ ಸಾಧ್ಯತೆಯಿದೆ. ಆದುದರಿಂದ ಉಗುರುಗಳನ್ನು ರಾತ್ರಿವೇಳೆ ಕತ್ತರಿಸಬಾರದೆಂದು ಹೇಳುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

 

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ