ಹಗಲಿನ ಹೊತ್ತಿನಲ್ಲಿ ಒಂದು ಸಣ್ಣ ನಿದ್ದೆ ಮಾಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಗೊತ್ತಾ…?

ಬುಧವಾರ, 14 ಮಾರ್ಚ್ 2018 (11:34 IST)
ಬೆಂಗಳೂರು: ಮನುಷ್ಯನ ದೇಹಕ್ಕೆ ಎಂಟು ಗಂಟೆ ನಿದ್ರೆ ಸಾಕು ಎನ್ನುತ್ತಾರೆ. ಆದರೆ ಕೆಲವೊಮ್ಮೆ ದೇಹ ಆಯಾಸದಿಂದ ಕೂಡಿರುತ್ತದೆ. ಆಗ ಹಗಲು ಹೊತ್ತಿನಲ್ಲಿ ಸಣ್ಣದೊಂದು ನಿದ್ದೆ ಮಾಡಿದರೆ ಮನಸ್ಸಿನ  ಒತ್ತಡವೂ ನಿವಾರಣೆಯಾಗುತ್ತದೆ. ಹಾಗಂತ ಅತೀಯಾದ ನಿದ್ದೆ ಮಾಡಬೇಡಿ. ಸಣ್ಣದೊಂದು ನಿದ್ದೆ ಮಾಡಿದರೆ ಎಷ್ಟೆಲ್ಲಾ ಪ್ರಯೋಜನವಿದೆ ಎಂಬುದರ ಬಗ್ಗೆ ಇಲ್ಲಿದೆ ನೋಡಿ.


ಹೃದಯದ ಆರೋಗ್ಯ : ಒಂದು ಸಣ್ಣ ನಿದ್ದೆ ಮಾಡಿದರೆ ಹೃದಯಕ್ಕೆ ಸರಿಯಾದ ರೀತಿಯಲ್ಲಿ ರಕ್ತ ಪರಿಚಲನೆಯಾಗುತ್ತದೆ. ಇದರಿಂದ ಹೃದಯ ಆರೋಗ್ಯದಿಂದಿರಲು ಸಹಾಯವಾಗುತ್ತದೆ

ಬಿಪಿ ಕಡಿಮೆಯಾಗುತ್ತದೆ : ದೇಹದಲ್ಲಿ ರಕ್ತ ಪರಿಚಲನೆಯನ್ನು ಸುಧಾರಿಸುತ್ತದೆ. ಇದು ರಕ್ತದೊತ್ತಡ ಇರುವ ರೋಗಿಗಳಿಗೆ ಹೆಚ್ಚು ಲಾಭದಾಯಕವಾಗಿದೆ.

ಆಯಾಸ ನಿವಾರಣೆ : ದೇಹದ ಆಯಾಸವನ್ನು ಕಡಿಮೆ ಮಾಡುತ್ತದೆ. ಮತ್ತೆ ಉಲ್ಲಾಸಮಯವಾಗಿರುವಂತೆ ಮಾಡುತ್ತದೆ.


ನರವ್ಯೂಹ ಸುಧಾರಣೆ : ದಿನದಲ್ಲಿ 30 ನಿಮಿಷ ನಿದ್ದೆ ರಕ್ತ ಪರಿಚಲನೆಯನ್ನು ಇಂಪ್ರೂವ್‌ ಮಾಡುತ್ತದೆ. ಇದರಿಂದ ನರವ್ಯೂಹ ವ್ಯವಸ್ಥೆ ಸುಧಾರಣೆಯಾಗುತ್ತದೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ