ರಾತ್ರಿ ಊಟ ಮಾಡುವುದರಿಂದ ತೂಕ ಹೆಚ್ಚಾಗುವುದೇ?
ಬೆಳಗ್ಗೆ ಮತ್ತು ಮಧ್ಯಾಹ್ನದ ಊಟ ಹೊಟ್ಟೆ ತುಂಬಾ ಸೇವಿಸಿದರೂ ಅದನ್ನು ಜೀರ್ಣಿಸಿಕೊಳ್ಳಲು ಬೇಕಾದಷ್ಟು ಚಟುವಟಿಕೆ ನಮ್ಮ ದೇಹಕ್ಕೆ ಸಿಗುತ್ತದೆ. ಆದರೆ ರಾತ್ರಿ ತಡವಾಗಿ ಊಟ ಮಾಡಿದರೆ ಅದು ಜೀರ್ಣವಾಗಲು ಸಮಯ ಸಿಗದು.
ಅದರಲ್ಲೂ ಹೆಚ್ಚು ಕ್ಯಾಲೊರಿಯುಕ್ತ ಆಹಾರವನ್ನು ರಾತ್ರಿ ಸೇವಿಸಿ ಮಲಗುವುದರಿಂದ ಬೊಜ್ಜು ಬೆಳೆಯಬಹುದು. ತಜ್ಞರ ಪ್ರಕಾರ ಒಂದು ದಿನಕ್ಕೆ 1400 ಕ್ಯಾಲೊರಿಗಿಂತ ಹೆಚ್ಚು ಆಹಾರ ಸೇವನೆ ಮಾಡಬಾರದು. ಹಾಗೆಯೇ ರಾತ್ರಿ ಆಹಾರವನ್ನು ಮಲಗುವ ಎರಡು ಗಂಟೆಗಳ ಮೊದಲು ಸೇವಿಸಬೇಕು. ಹೀಗೆ ಮಾಡಿದರೆ ಮಾತ್ರ ತೂಕ ಹೆಚ್ಚಾಗದು ಎನ್ನಲಾಗುತ್ತದೆ.