ಮಂಗಳವಾರ ದಿನ ಆಂಜನೇಯನಿಗೆ ತಪ್ಪದೇ ಹೀಗೆ ಪೂಜೆ ಮಾಡಿ

Krishnaveni K

ಮಂಗಳವಾರ, 18 ಜೂನ್ 2024 (08:58 IST)
ಬೆಂಗಳೂರು: ಮಂಗಳವಾರ ಬಂತೆಂದರೆ ಆಂಜನೇಯನ ವಾರ ಎಂದೇ ಅರ್ಥ. ಆಂಜನೇಯನಿಗೆ ಈ ದಿನ ಪೂಜೆ ಮಾಡಿದರೆ ನಮ್ಮ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ ಎಂಬ ನಂಬಿಕೆಯಿದೆ.

ಮಂಗಳವಾರ ಆಂಜನೇಯನ ಪೂಜೆ ಮಾಡಲು ಉಪವಾಸವಿದ್ದು ವ್ರತ ಕೈಗೊಳ್ಳಬೇಕು. ಜೊತೆಗೆ ಓಂ ಹನುಮತೇ ನಮಃ ಎಂಬ ಮಂತ್ರವನ್ನು 108 ಬಾರಿ ಜಪಿಸಿ. ಹನುಮಂತಹ ಸಂಕಟ ಹರ, ಭಯ ನಾಶ ಮಾಡುವವನು. ಹೀಗಾಗಿ ಈ ದಿನ ಹನುಮಂತನ ಪೂಜೆ ಮಾಡುವುದು ಉತ್ತಮ.

ಆಂಜನೇಯನಿಗೆ ಪ್ರಿಯವಾದುದು ಎಂದರೆ ವೀಳ್ಯದ ಎಲೆಯ ಹಾರ. ಮಂಗಳವಾರದಂದು ಯಾವುದಾದರೂ ಹನುಮಂತನ ಗುಡಿಗೆ ಹೋಗಿ ವೀಳ್ಯದ ಹಾರವನ್ನು ಕಾಣಿಕೆಯಾಗಿ ನೀಡಿದರೆ ಉದ್ಯೋಗ, ಶನಿ ವಕ್ರದೃಷ್ಟಿ, ವಿದ್ಯಾಭ್ಯಾಸ, ಹಣಕಾಸಿನ ತೊಂದರೆಗಳು ಇತ್ಯಾದಿ ಸಂಕಷ್ಟಗಳಿಂದ ಪರಿಹಾರ ಸಿಗುವುದು.

ಹನುಮಂತನನ್ನು ಈ ರೀತಿಯಾಗಿ ಪೂಜಿಸಲು ಮಂಗಳವಾರ ಮತ್ತು ಶನಿವಾರ ಸೂಕ್ತವಾದ ದಿನಗಳು. ತ್ರೇತಾಯುಗದಲ್ಲಿ ಸ್ವತಃ ಸೀತಾಮಾತೆ ತನ್ನನ್ನು ನೋಡಲು ಬಂದ ಹನುಮಂತನಿಗೆ ವೀಳ್ಯದ ಎಲೆಯನ್ನು ಹಾಕಿ ಸ್ವಾಗತಿಸಿದಳಂತೆ. ಸ್ವತಃ ಆ ತಾಯಿಯೇ ಹಾಕಿದ ಹಾರ ಹನುಮಂತನಿಗೆ ಇಂದು ಪ್ರೀತ್ಯರ್ಥವಾಗಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ