ಮನೆ ಅಥವಾ ಆಸ್ತಿ ನೋಂದಣಿ ಮಾಡಲು ಯಾವ ದಿನ ಸೂಕ್ತ

Krishnaveni K

ಬುಧವಾರ, 26 ಜೂನ್ 2024 (08:39 IST)
ಬೆಂಗಳೂರು: ಜೀವನದಲ್ಲಿ ಒಂದು ಹಂತಕ್ಕೆ ಬಂದಾಗ ಪ್ರತಿಯೊಬ್ಬರೂ ತಮ್ಮದೇ ಸೂರು ಕಟ್ಟಿಕೊಳ್ಳಲು ನೋಡುತ್ತಾರೆ. ಹಾಗಿದ್ದರೆ ಇಂದು ಮನೆ ಅಥವಾ ಆಸ್ತಿ ಖರೀದಿಗೆ ಯಾವ ದಿನ ಸೂಕ್ತ ಎಂದು ನೋಡೋಣ.

ಮದುವೆ, ಮಕ್ಕಳು ಎಷ್ಟು ಮುಖ್ಯವೋ ಅದೇ ರೀತಿ ತಮ್ಮದೇ ಒಂದು ಗೂಡು ಕಟ್ಟಿಕೊಳ್ಳುವುದೂ ಒಬ್ಬ ವ್ಯಕ್ತಿಗೆ ಮುಖ್ಯವಾಗಿರುತ್ತದೆ. ತಮ್ಮದೇ ಮನೆ ಅಥವಾ ಆಸ್ತಿ ಖರೀದಿ ಮಾಡಿದಾಗ ಅದರಿಂದಾಗುವ ಸಂತೋಷ ಅಥವಾ ನೆಮ್ಮದಿಗೆ ಹೋಲಿಕೆಯೇ ಇರುವುದಿಲ್ಲ.

ಆದರೆ ಮನೆ ಅಥವಾ ಆಸ್ತಿ ಖರೀದಿ ಮಾಡಿದಾಗ ಅದು ನಮಗೆ ಅಭಿವೃದ್ಧಿ ತಂದುಕೊಡಬೇಕು. ಇದಕ್ಕಾಗಿ ಒಳ್ಳೆಯ ದಿನ ನೋಡಿ ಮನೆ ಅಥವಾ ಆಸ್ತಿ ಖರೀದಿ ಮಾಡುವುದು, ನೋಂದಣಿ ಮಾಡಿಕೊಳ್ಳುವುದು ಮುಖ್ಯ. ಅಶುಭ ಮುಹೂರ್ತ, ನಕ್ಷತ್ರ, ದಿನಗಳಲ್ಲಿ ಮನೆ ಖರೀದಿ ಮಾಡಿದರೆ ಅದರಿಂದ ನಮಗೆ ಕೆಟ್ಟ ಫಲಗಳೇ ಹೆಚ್ಚು.

ಮನೆ ಅಥವಾ ಆಸ್ತಿ ಖರೀದಿ ಮಾಡುವುದಿದ್ದರೆ ಶುಭ ದಿನಗಳೆಂದರೆ ಶುಕ್ರವಾರ, ಮಂಗಳವಾರ ಮತ್ತು ಗುರುವಾರ. ಈ ದಿನಗಳಂದು ರಾಹುಕಾಲ, ಯಮಗಂಡ ಕಾಲ ಮತ್ತು ಗುಳಿಗಕಾಲವನ್ನು ಹೊರತುಪಡಿಸಿದ ಸಂದರ್ಭದಲ್ಲಿ ನೋಂದಣಿ ಪ್ರಕ್ರಿಯೆ ಮಾಡಿ. ಅದೇ ರೀತಿ ಈ ದಿನಗಳಂದು ಭರಣಿ-ಕೃತ್ತಿಕೆ ನಕ್ಷತ್ರಗಳು ಬರಬಾರದು. ಆಶ್ಲೇಷ, ಪಾಲ್ಗುಣಿ, ಉತ್ತರಾಷಾಢ, ರೋಹಿಣಿ, ಮಘ, ಪೂರ್ವಾಭದ್ರ, ಅನುರಾಧ, ವಿಶಾಖ ನಕ್ಷತ್ರಗಳಿರುವ ದಿನಗಳಂದು ಆಸ್ತಿ ನೋಂದಣಿ ಮಾಡಿಕೊಳ್ಳಬಹುದು. ಭೂಮಿ ಅಥವಾ ಆಸ್ತಿಗೆ ಸಂಬಂಧಿಸಿದ ಯಾವುದೇ ಕೆಲಸಗಳನ್ನು ಈ ದಿನ ಮತ್ತು ಮುಹೂರ್ತ, ನಕ್ಷತ್ರ ನೋಡಿಕೊಂಡು ಮಾಡಿ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ