ಬೆಂಗಳೂರು: ಮೀನ ರಾಶಿಯವರ ಗುಣ ಸ್ವಭಾವವೆಂದರೆ ಅವರು ಅತ್ಯಂತ ಬುದ್ಧಿವಂತರಾಗಿರುತ್ತಾರೆ. ಆದರೆ ಕೆಲವೊಮ್ಮೆ ಈ ಅತಿಯಾದ ಬುದ್ಧಿವಂತಿಕೆಯೇ ಅವರಿಗೆ ಮುಳುವಾಗುತ್ತದೆ. ಈ ರಾಶಿಯವರ ಅತ್ಯಂತ ದೊಡ್ಡ ಅವಗುಣವೇನು ಅದಕ್ಕೆ ಪರಿಹಾರವೇನು ಎಂದು ನೋಡೋಣ.
ಮೀನ ರಾಶಿಯವರು ಅತ್ಯಂತ ತೀಕ್ಷ್ಣ ಮತಿಯವರು, ಭಾವನಾತ್ಮಕವಾಗಿ ಚುರುಕಾಗಿರುವವರು, ಕ್ರಿಯಾತ್ಮಕವಾಗಿ ಯೋಚನೆ ಮಾಡುವ ಸಾಮರ್ಥ್ಯ ಹೊಂದಿರುತ್ತಾರೆ. ಒಂದು ವಿಚಾರವನ್ನು ಅವರು ಎಲ್ಲರಿಗಿಂತ ವಿಭಿನ್ನ ದೃಷ್ಟಿಕೋನದಿಂದ ನೋಡುವ ಸಾಮರ್ಥ್ಯವುಳ್ಳವವರು ಆಗಿರುತ್ತಾರೆ.
ಆದರೆ ಕೆಲವೊಮ್ಮೆ ಅತೀ ಬುದ್ಧಿವಂತಿಕೆಯೂ ಅನಾಹುತಕ್ಕೆ ಕಾರಣ ಅಂತಾರಲ್ಲ? ಈ ರಾಶಿಯವರಿಗೂ ಅದೇ ಸಮಸ್ಯೆ. ಎಲ್ಲಾ ತನಗೆ ಗೊತ್ತು, ಇನ್ನೊಬ್ಬರಿಂದ ಹೇಳಿಸಿಕೊಳ್ಳಬೇಕಾಗಿಲ್ಲ ಎಂಬ ಧೋರಣೆ ಇರುತ್ತದೆ. ಯಾರ ಸಲಹೆಗಳನ್ನೂ ಕಿವಿ ಮೇಲೇ ಹಾಕಿಕೊಳ್ಳದ ಅ
ಅಹಂಕಾರ ತಲೆಗೇರುತ್ತದೆ.
ಇಂತಹ ಸಂದರ್ಭದಲ್ಲಿ ಕೆಲವೊಮ್ಮೆ ಅವರ ಈ ಗುಣ ಅವರಿಗೇ ಮುಳುವಾಗುವ ಸಾಧ್ಯತೆಯಿರುತ್ತದೆ. ತಮ್ಮ ಈ ಬುದ್ಧಿಯಿಂದ ತಾವೇ ಸಂಕಷ್ಟಕ್ಕೀಡಾಗುತ್ತಾರೆ. ಹೀಗಾಗಿ ಈ ರಾಶಿಯವರು ಈ ಸ್ವಭಾವ ಬಿಡಬೇಕೆಂದರೆ ಪ್ರತಿನಿತ್ಯ ಗಾಯತ್ರಿ ಮಂತ್ರವನ್ನು ಭಕ್ತಿಯಿಂದ ಜಪಿಸಿ ಪ್ರಾರ್ಥನೆ ಸಲ್ಲಿಸುವುದು ಉತ್ತಮವಾಗಿದೆ.