ಸೃಷ್ಟಿಯ ಪರಿಪಾಲಕನಾದ ಮಹಾವಿಷ್ಣುವನ್ನು ಆಷಾಢ ಮಾಸದಲ್ಲಿ ಆರಾಧನೆ ಮಾಡುವುದರಿಂದ ನಮಗಿರುವ ಕಷ್ಟಗಳೆಲ್ಲಾ ಪರಿಹಾರವಾಗುತ್ತದೆ. ಜೊತೆಗೆ ಪಿತೃ ದೋಷಗಳೂ ನಿವಾರಣೆಯಾಗಿ ಮನೆಯಲ್ಲಿ ಸಮಸ್ತ ಅಭಿವೃದ್ಧಿ, ನೆಮ್ಮದಿ ಕಂಡುಕೊಳ್ಳಬಹುದು ಎಂದು ಶಾಸ್ತ್ರಗಳು ಹೇಳುತ್ತವೆ.
ಅದಕ್ಕಾಗಿ ನಾವು ಮಹಾವಿಷ್ಣುವಿನ ಈ ಮೂಲ ಮಂತ್ರವನ್ನು ಪ್ರತಿನಿತ್ಯ ಜಪಿಸಬೇಕು. ಅದು ಹೀಗಿದೆ:
ಸಹಾರ ವಕ್ಷಸ್ಥಳ ಕೌಸ್ತುಭ ಶ್ರಿಯಾಂ
ನಮಾಮಿ ವಿಷ್ಣುಂ ಶಿರಸಾ ಚುತುರ್ಭುಜಂ
ಈ ಮಂತ್ರವನ್ನು ಪ್ರತಿನಿತ್ಯ ಜಪಿಸಬೇಕು. ಇದರಿಂದ ಬುದ್ಧಿ, ಏಕಾಗ್ರತೆ ಹೆಚ್ಚುವುದು. ಅಲ್ಲದೆ ಒಬ್ಬ ವ್ಯಕ್ತಿಯು ತ್ವರಿತವಾಗಿ ಸಕಲ ರೀತಿಯಲ್ಲಿ ಏಳಿಗೆಯನ್ನು ಕಾಣುವನು. ಜೊತೆಗೆ ಜೀವನದಲ್ಲಿ ಸಂತೋಷವನ್ನು ಕಾಣುವನು. ವಿದ್ಯಾರ್ಥಿಗಳಲ್ಲಿ ಏಕಾಗ್ರೆತೆ ಜೊತೆಗೆ ವಿದ್ಯೆಯಲ್ಲಿ ಯಶಸ್ಸು ಪಡೆಯುತ್ತಾರೆ. ಹೀಗಾಗಿ ತಪ್ಪದೇ ಈ ಮಂತ್ರವನ್ನು ಜಪಿಸಿ.