ಅನ್ನದಿಂದ ಭಗವಂತನನ್ನು ಹೇಗೆ ಪೂಜಿಸಬೇಕು ಅದರಿಂದ ಏನು ಫಲ ದೊರೆಯುತ್ತದೆ ಎಂದು ತಿಳಿಬೇಕಾ...?

ಶುಕ್ರವಾರ, 16 ಮಾರ್ಚ್ 2018 (06:10 IST)
ಬೆಂಗಳೂರು : ಅನ್ನ ಪರಬ್ರಹ್ಮ ಸ್ವರೂಪ ಎಂದು ಹೇಳುತ್ತಾರೆ. ಬಿಳಿ ಅನ್ನದಿಂದ ಮಾಡುವ ಪೂಜೆಗಳು ಅನೇಕ ಶುಭಗಳನ್ನು ಪಡೆಯುತ್ತಾರೆ ಎಂದು ಆಧ್ಯಾತ್ಮಿಕ ಶಾಸ್ತ್ರ ಹೇಳುತ್ತದೆ. ಎಲ್ಲಾ ದಾನಗಳಿಗಿಂತ ಶ್ರೇಷ್ಠವಾದ ದಾನ ಅದು ಅನ್ನದಾನ ಎಂಬುದು ಎಲ್ಲರಿಗೂ ತಿಳಿದಿದೆ. ಈ ಅನ್ನದಿಂದ ಆ ಭಗವಂತನನ್ನು ಹೇಗೆ ಪೂಜಿಸಬೇಕು ಅದರಿಂದ ಏನು ಫಲ ದೊರೆಯುತ್ತದೆ ಎಂಬುದು ಇಲ್ಲಿದೆ.


*ಬಿಳಿ ಅನ್ನದಲ್ಲಿ ಶಿವಲಿಂಗವನ್ನು ಮಾಡಿ, ಪೂಜಿಸಿ  ನೀರಿನಲ್ಲಿ ಬಿಟ್ಟರೆ  ಹಣದ ಕೊರತೆ ಇರುವುದಿಲ್ಲ. ಎಷ್ಟೇ ಕಷ್ಟಗಳಿದ್ದರೂ, ಎಷ್ಟೇ ಬಡತನವಿದ್ದರೂ ನಿವಾರಣೆಯಾಗುತ್ತದೆ.

*ಅನ್ನವನ್ನು ದೇವರಿಗೆ ನೈವೇದ್ಯಮಾಡಿ ಪ್ರಸಾದವನ್ನು ಹಸುಗಳಿಗೆ ತಿನ್ನಿಸಿದರೆ , ಅವಿವಾಹಿತರಿಗೆ ತಾಂಬೂಲ ಕೊಟ್ಟು ನಮಸ್ಕರಿಸಿದರೆ  ಬರಬೇಕಾಗಿರುವ  ಹಣ  ನಮಗೆ ಬೇಗ ಸಿಗುತ್ತದೆ.

*ಅನ್ನಕ್ಕೆ ಜೇನುತುಪ್ಪವನ್ನು  ಕಲಸಿ ಅದನ್ನು ನೈವೇದ್ಯವಾಗಿ ಇಟ್ಟರೆ ಎಲ್ಲಾ ತರಹದ ಚರ್ಮ ರೋಗಗಳು ಕಡಿಮೆ ಯಾಗುತ್ತದೆ ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ.

*ಬಿಳಿ ಅನ್ನಕ್ಕೆ ಕಪ್ಪು ಎಳ್ಳು ಬೆರೆಸಿ, ಅದನ್ನು ಶನಿದೇವನಿಗೆ ನೈವೇದ್ಯವಾಗಿ ಇಟ್ಟು, ನಂತರ ಕಾಗೆಗಳಿಗೆ ಇಟ್ಟರೆ  ಪಿತೃ ದೇವತೆಗಳ ಶಾಪಗಳೆಲ್ಲ ನಿವಾರಣೆಯಾಗುತ್ತದೆ.

*ಬಿಳಿ ಅನ್ನಕ್ಕೆ ಜೇನುತುಪ್ಪ, ಸಕ್ಕರೆ, ಅಡುಗೆಗೆ ಬಳಸುವ ಕೊಬ್ಬರಿ ಎಣ್ಣೆ ಸೇರಿಸಿ, ಆ ಅನ್ನವನ್ನು ದೇವತೆಗಳಿಗೆ ನೈವೇದ್ಯವಾಗಿಟ್ಟು ಅದನ್ನು ದಾನ ಮಾಡಿದರೆ ಸಕಲ ರೋಗಗಳು ವಾಸಿಯಾಗುತ್ತವೆ.

ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ