ದೇವಸ್ಥಾನಗಳಲ್ಲಿ ಆಂಜನೇಯನ ಬಾಲಕ್ಕೆ ಬೆಣ್ಣೆ ಸವರುವುದು ಯಾಕೆ ಗೊತ್ತಾ..?

ಸೋಮವಾರ, 30 ಏಪ್ರಿಲ್ 2018 (06:42 IST)
ಬೆಂಗಳೂರು : ಆಂಜನೇಯನ ದೇವಸ್ಥಾನಗಳಲ್ಲಿ ಹೆಚ್ಚಾಗಿ ಆಂಜನೇಯನ ಮೂರ್ತಿಗೆ ಅಥವಾ ಬಾಲಕ್ಕೆ ಬೆಣ್ಣೆಯನ್ನು ಹಚ್ಚಿ ಪೂಜಿಸುತ್ತಾರೆ. ಕೆಲವರಿಗೆ ಇದರ ಹಿಂದಿನ ಕಾರಣವೆನೆಂಬುದು ತಿಳಿದಿಲ್ಲ. ಯಾಕೆ ಈ ರೀತಿ ಆಂಜನೇಯನ ಬಾಲಕ್ಕೆ ಬೆಣ್ಣೆ ಹಚ್ಚುತ್ತಾರೆ ಎಂಬುದರ ಬಗ್ಗೆ ಮಾಹಿತಿ ಇಲ್ಲಿದೆ ನೋಡಿ.


ರಾಮಾಯಣದಲ್ಲಿ ರಾವಣನಿಂದ ಅಪಹರಿಸಲ್ಪಟ್ಟ ಸೀತೆಯನ್ನು ಪತ್ತೆ ಹಚ್ಚಲು ರಾಮ ಹನುಮಂತನನ್ನು ಕಳುಹಿಸಿದ ವಿಷಯ ಎಲ್ಲರಿಗೂ ತಿಳಿದೇ ಇರುತ್ತದೆ. ಆದರೆ ಸೀತೆಯ ಅನ್ವೇಷಣೆಯ ಭಾಗವಾಗಿ ಲಂಕೆಗೆ ತೆರಳಿದ ಹನುಮಂತ ಅಲ್ಲಿ ಸೀತೆಯನ್ನು ಕಂಡ ನಂತರ ತುಂಬಾ ಚೇಷ್ಟೆ ಮಾಡುತ್ತಾನೆ. ಆದ್ದರಿಂದ ಲಂಕೆಯಲ್ಲಿನ ರಾಕ್ಷಸರು ಹನುಮಂತನ ಬಾಲಕ್ಕೆ ಬೆಂಕಿ ಇಡುತ್ತಾರೆ. ಹನುಮಂತನು ಸುಮ್ಮನಾಗದೆ ಆ ಜ್ವಾಲೆಯಿಂದ ಇಡೀ ಲಂಕೆಗೆ ಬೆಂಕಿ ಇಡುತ್ತಾನೆ. ಆಗ ಲಂಕೆಯು ಅರ್ಧಭಾಗ ದಹನವಾಗುತ್ತದೆ. ಈಗಾಗಲೇ ಸುಟ್ಟುಹೋಗುತ್ತಿರುವ ಹನುಮಂತನ ಬಾಲಕ್ಕೆ ಉಪಶಮನ ಮಾಡಬೇಕಲ್ಲವೆ. ಅದಕ್ಕೆ ಭಕ್ತರು ಆಂಜನೇಯನ ಬಾಲಕ್ಕೆ ಬೆಣ್ಣೆ ಹಚ್ಚುತ್ತಾರೆ.


ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ ಲೋಡ್ ಮಾಡಿಕೊಳ್ಳಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ