ಮಹಿಳೆಯರು ಮೂಗುತಿ, ಬಳೆ, ಕಿವಿಯೊಲೆ, ಕಾಲುಂಗುರ ಧರಿಸಬೇಕು ಎಂದು ಹಿರಿಯರು ಹೇಳಲು ಕಾರಣವೇನು?

ಸೋಮವಾರ, 12 ಆಗಸ್ಟ್ 2019 (09:34 IST)
ಬೆಂಗಳೂರು : ಮದುವೆಯಾದ ಮಹಿಳೆಯರು ಮೂಗುತಿ, ಬಳೆ, ಕಿವಿಯೊಲೆ, ಕಾಲುಂಗುರ ಎಲ್ಲವನ್ನು ಧರಿಸಬೇಕು ಎಂದು ಹಿರಿಯರು ಹೇಳುತ್ತಾರೆ. ಅದನ್ನು ಅವರು ಸಂಪ್ರದಾಯ ಎಂದು ಹೇಳಿದರೂ ಕೂಡ ಅದರ  ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಅದೇನೆಂದು ತಿಳಿಯಬೇಕಾ.




*ಮಹಿಳೆಯರು ಕಿವಿಯೊಲೆ ಧರಿಸುವುದರಿಂದ ಎಲ್ಲಿ ಎಷ್ಟು ಮಾತನಾಡಬೇಕು ಹೇಗೆ ಮಾತನಾಡಬೇಕು ಎಂದು ತುಂಬಾ ಬುದ್ಧಿವಂತಿಕೆಯಿಂದ ನಿರ್ಧಾರ ತೆಗೆದುಕೊಳ್ಳುತ್ತಾರಂತೆ.


*ಮಹಿಳೆಯರು ಮೂಗು ಚುಚ್ಚಿಕೊಳ್ಳುವುದರಿಂದ ಕಿವಿಯ ಸಮಸ್ಯೆ ,ಉಸಿರಾಟದ ಸಮಸ್ಯೆ, ಪಾರ್ಶ್ವವಾಯು ಇಂತಹ ಸಮಸ್ಯೆಗಳಿಂದ ದೂರವಿರಬಹುದು. ಎಡ ಮೂಗಿನ ಹೊಳ್ಳೆ ಚುಚ್ಚುವುದರಿಂದ ಗರ್ಭಕೋಶದ ನಾಡಿಗಳನ್ನು ಹತೋಟಿಯಲ್ಲಿ ಇಡಬಹುದು.

*ಹೆಣ್ಣುಮಕ್ಕಳು ಹೆಚ್ಚಾಗಿ ಮನೆಯಲ್ಲಿಯೇ ಇರುವುದರಿಂದ ಅವರ ರಕ್ತ ನಾಡಿಗಳ ಚಲನ ವಲನ ನಿಯಂತ್ರಣದಲ್ಲಿಡಲು ಬಳೆಗಳು ಸಹಕರಿಸುತ್ತದೆ.

*ಕಾಲಿನ ಎರಡನೇ ಬೆರಣಿನ ನಾಡಿ ಗರ್ಭಕೋಶಕ್ಕೆ ಸಂಬಂಧಪಟ್ಟಿರುವುದರಿಂದ ಕಾಲುಂಗರವನ್ನು ಧರಿಸುವುದರಿಂದ ನಿರ್ದಿಷ್ಟ ಪ್ರಮಾಣದ ಶಾಖ ಅಥವಾ ಉಷ್ಣ ನಾಡಿಯನ್ನು ತಲುಪಲು ಸಹಾಯ ಮಾಡುತ್ತದೆ ಅಲ್ಲದೆ ಇದು ಋತು ಚಕ್ರವನ್ನು ಸರಿಯಾಗಿ ಆಗುವಂತೆ ನೋಡಿಕೊಳ್ಳುವುದು ಹಾಗು ಸಂತಾನ ಸಮಸ್ಯೆಯನ್ನು ದೂರಮಾಡುವುದು.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ