ಕಪ್ಪಾದ ಮೊಣಕೈಕಾಲುಗಳನ್ನು ಚೆಂದಗಾಣಿಸಲು ಈ ಮನೆಮದ್ದನ್ನು ಬಳಸಿ

ಸೋಮವಾರ, 12 ಆಗಸ್ಟ್ 2019 (09:16 IST)
ಬೆಂಗಳೂರು : ಸೂರ್ಯನ ಬಿಸಿಲು ಹೆಚ್ಚಾಗಿ ಕೈ ಕಾಲಿಗೆ ಬೀಳುವುದರಿಂದ ಮೊಣಕೈ ಕಾಲುಗಳ ಚರ್ಮ ಡೆಡ್ ಆಗಿ ಕಪ್ಪಾಗಿ, ಒರಟಾಗಿರುತ್ತದೆ. ಇದರಿಂದ ಶಾರ್ಟ್ ಡ್ರೆಸ್ ಗಳನ್ನು ಧರಿಸಲು ಆಗುವುದಿಲ್ಲ. ಈ ಡೆಡ್ ಸ್ಕೀನ್ ಗಳನ್ನು ನಿರ್ಮೂಲನೆ ಮಾಡಿ ಮೊಣಕೈಕಾಲುಗಳನ್ನು ಮೃದುವಾಗಿಸಲು ಈ ಮನೆಮದ್ದನ್ನು ಬಳಸಿ.




2 ಚಮಚ ಜೇನುತಪ್ಪು, 1 ಚಮಚ ಆಲಿವ್ ಆಯಿಲ್, ½ ಚಮಚ ನಿಂಬೆರಸ, 1 ಚಮಚ ಅಡುಗೆ ಸೋಡಾ ಇವಿಷ್ಟನ್ನು ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮೊಣಕೈ ಹಾಗೂ ಮೊಣಕಾಲುಗಳಿಗೆ ರಾತ್ರಿ ಹಚ್ಚಿಕೊಳ್ಳಿ. ಇದಕ್ಕೆ ಬಟ್ಟೆ ಕಟ್ಟಿ ರಾತ್ರಿ ಪೂರ್ತಿ ಇಡಿ. ಬೆಳಿಗ್ಗೆ ಬಿಸಿ ನೀರಿನಲ್ಲಿ ಸ್ವಚ್ಛಗೊಳಿಸಿ, ತೆಂಗಿನ ಎಣ್ಣೆಯನ್ನು ಹಚ್ಚಿಕೊಳ್ಳಿ. ತಿಂಗಳಿನಲ್ಲಿ ಮೂರು ಬಾರಿ ಇದನ್ನು ಬಳಸಿದರೆ ಉತ್ತಮ ಫಲಿತಾಂಶ ಸಿಗಲಿದೆ.

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ