ನಡೆಯುವ ಹಾದಿಯಲ್ಲಿ ಕಾಗೆ ಪುಕ್ಕ ಸಿಕ್ಕರೆ ಅದರ ಅರ್ಥವೇನು ಗೊತ್ತಾ?

ಶುಕ್ರವಾರ, 11 ಜನವರಿ 2019 (08:58 IST)
ಬೆಂಗಳೂರು: ನಾವು ನಡೆದಾಡುವ ದಾರಿಯಲ್ಲಿ ಹಕ್ಕಿ ಪುಕ್ಕ ಸಿಗುವುದು ಸಾಮಾನ್ಯ. ಇದರಲ್ಲೇನು ವಿಶೇಷ ಅಂತೀರಾ? ಶನಿಯ ವಾಹನ ಎಂದೇ ಪರಿಗಣಿತವಾದ ಕಾಗೆ ಪುಕ್ಕ ದಾರಿಯಲ್ಲಿ ಸಿಕ್ಕರೆ ಅದು ನಿಮ್ಮ ಭವಿಷ್ಯ ಸೂಚಿಸುತ್ತದೆ ಎಂಬುದು ನಿಮಗೆ ಗೊತ್ತಾ?


ಇದು ಅಚ್ಚರಿಯಾದರೂ ಸತ್ಯ. ಸಾಮಾನ್ಯವಾಗಿ ಕಾಗೆ ಪುಕ್ಕ ಕಪ್ಪು ಅಥವಾ ತುಸು ಕಂದು ಬಣ್ಣದಲ್ಲಿರುತ್ತದೆ. ಈ ಪುಕ್ಕ ನಾವು ನಡೆದಾಡುವ ದಾರಿಯಲ್ಲಿ ಸಿಗುವುದು ಶುಭ ಚಿಹ್ನೆ ಎಂದೇ ಪರಿಗಣಿತವಾಗಿದೆ.

ಕಾಗೆಯ ಪುಕ್ಕ ದಾರಿಯಲ್ಲಿ ಸಿಕ್ಕರೆ ನಾವು ಸಾಗುತ್ತಿರುವ ಜೀವನದ ಹಾದಿ ಸರಿಯಾಗಿದೆ ಎಂದೇ ಅರ್ಥ. ನಾವು ಆ ಸಂದರ್ಭದಲ್ಲಿ ಯಾವುದಾದರೂ ಒಂದು ಹೊಸ ವ್ಯವಹಾರ, ಕೆಲಸಕ್ಕೆ ಕೈ ಹಾಕಿದರೆ ಅದು ಸರಿಯಾದ ರೀತಿಯಲ್ಲಿದೆ ಎಂದರ್ಥ ಎಂಬ ನಂಬಿಕೆಯಿದೆ. ಕಾಗೆ ನಮ್ಮ ಮೇಲೆ, ಅಥವಾ ನಮ್ಮ ವಾಹನದ ಮೇಲೆ ಕೂತರೆ ಶನಿ ವಕ್ರ ದೃಷ್ಟಿ ಎಂದು ನಂಬಲಾಗುತ್ತದೆ. ಆದರೆ ಕಾಗೆ ಪುಕ್ಕ ನಮಗೆ ಶುಭ ಸೂಚನೆ ಕೊಡುತ್ತದಂತೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ