ಸೋಮವಾರ ಶಿವನ ಪಂಚಾಕ್ಷರ ಮಂತ್ರ ಜಪಿಸಿದರೆ ಏನಾಗುತ್ತದೆ ಗೊತ್ತಾ?

ಮಂಗಳವಾರ, 8 ಜನವರಿ 2019 (09:24 IST)
ಬೆಂಗಳೂರು: ಸೋಮವಾರ ಶಿವ ಭಕ್ತರ ಪಾಲಿಗೆ ವಿಶೇಷ ದಿನ. ಇದು ಶಿವ ದೇವರ ದಿನವೆಂದೇ ಪರಿಗಣಿತವಾಗಿದೆ. ಹೀಗಾಗಿ ಶಿವ ದೇವಾಲಯಗಳಿಗೆ ಈ ದಿನ ಭೇಟಿ ಕೊಡುವುದು ವಿಶೇಷ.


ಯಾರಿಗೆ ಅಪಮೃತ್ಯುವಿನ ಭಯ ಕಾಡುತ್ತದೋ, ಯಾರಿಗೆ ಜೀವನದಲ್ಲಿ ಆತ್ಮವಿಶ್ವಾಸವಿಲ್ಲವೋ, ಯಾರಿಗೆ ಸೋಲಿನ ಭಯ ಕಾಡುತ್ತದೋ ಅಂತಹವರು ಸೋಮವಾರಗಳನ್ನು ಶಿವನ ಪೂಜೆ ಮಾಡಿದರೆ ಒಳಿತಾಗುತ್ತದೆ.

ಶಿವನ ಪೂಜೆ ಮಾಡುವಾಗ ತಪ್ಪದೇ ಪಂಚಾಕ್ಷರಿ ಮಂತ್ರ ಹೇಳಬೇಕು. ಶಿವ ನಿರಾಡಂಭರ ಪ್ರಿಯ. ಹೀಗಾಗಿ ಸೋಮವಾರಗಳಂದು ಉಪವಾಸವಿದ್ದು, ಶಿವ ಪಂಚಾಕ್ಷರಿ ಮಂತ್ರವಾದ ‘ಓಂ ನಮಃ ಶಿವಾಯ’ ಎಂದು ಹೇಳುತ್ತಾ ಭಕ್ತಿಯಿಂದ ಶಿವನನ್ನು ಪೂಜಿಸಿದರೆ ಆರೋಗ್ಯ, ಆಯಸ್ಸು ವೃದ್ಧಿಸಿ, ಜೀವನದಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ.

ತಾಜಾ ಸುದ್ದಿಗಳನ್ನು ಓದಲು ವೆಬ್ ದುನಿಯಾ ಮೊಬೈಲ್ ಆಪ್ ಡೌನ್ ಲೋಡ್ ಮಾಡಿ

ವೆಬ್ದುನಿಯಾವನ್ನು ಓದಿ

ಸಂಬಂಧಿಸಿದ ಸುದ್ದಿ